Publish Date: Mon, 27 Aug 2018 (19:38 IST)
Updated Date: Mon, 27 Aug 2018 (19:53 IST)
ತೀವ್ರ ಅನಾರೋಗ್ಯಕ್ಕೆ ಒಳಗಾಗಿರೋ ವೃದ್ಧೆಯೊಬ್ಬರನ್ನು ಆಕೆಯ ಮಗನೇ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕರೆದುಕೊಂಡು ಬಂದು ದಯಾಮರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡ ಘಟನೆ ನಡೆದಿದೆ.
ಅನಾರೋಗ್ಯಕ್ಕೆ ಒಳಗಾಗಿರೋ ತನ್ನ ತಾಯಿ ರಾತ್ರಿ ವೇಳೆ ಕಿರುಚಾಡುವುದು, ಕುಳಿತಕ್ಕೆ ಮಲಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದ್ರಿಂದ ಬೇಸತ್ತು ದಯಾಮರಣ ಕೊಡುವಂತೆ ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ತನ್ನ ತಾಯಿಯನ್ನು ಮಗನೊಬ್ಬ ಕರೆದುಕೊಂಡು ಬಂದ ಘಟನೆ ನಡೆದಿದೆ.
ತುಮಕೂರು ನಗರದ ನಾಗರತ್ನಮ್ಮ ಎಂಬುವರಿಗೆ ಸಾಕಷ್ಟು ಚಿಕಿತ್ಸೆ ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಮಗನೇ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ವೈದ್ಯಕೀಯ ಸಿಬ್ಬಂದಿಗಳನ್ನು ಕರೆಸಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಅದ್ರಂತೆ ಸಿಬ್ಬಂದಿ 108ನಲ್ಲಿ ವೃದ್ಧೆ ನಾಗರತ್ನಮ್ಮ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.