Publish Date: Tue, 05 Dec 2017 (15:47 IST)
Updated Date: Tue, 05 Dec 2017 (15:56 IST)
ಹೈದರಾಬಾದ್: ಏಳು ತಿಂಗಳ ಗರ್ಭಿಣಿಯೊಬ್ಬರು ಚಾಲಕ ಹಾಗೂ ಸಹಾಯಕನ ಕಾಮುಕ ವರ್ತನೆಯಿಂದ ಪಾರಾಗಲು ಚಲಿಸುತ್ತಿದ್ದ ವ್ಯಾನ್ ನಿಂದ ಹಾರಿ ಪ್ರಾಣ ಕಳೆದುಕೊಂಡ ಘಟನೆಯೊಂದು ತೆಲಂಗಾಣದ ಮೇಡಕೆ ಜಿಲ್ಲೆಯ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸರ್ಕಾರಿ ಬಸ್ ಸಿಗದೆ ಕಲಾವತಿ ಎಂಬ ಮಹಿಳೆ ತನ್ನ 7 ವರ್ಷದ ಮಗಳು ಸಿರೀಶಾ ಜತೆ ಒಂದು ವ್ಯಾನ್ ಹತ್ತಿದ್ದಾರೆ. ಹೆದ್ದಾರಿಯ ಟೋಲ್ ಕಟ್ಟುವಂತೆ ಆಕೆಯನ್ನು ಬಲವಂತಪಡಿಸಿ ಚಾಲಕ ಹಾಗೂ ಸಹಾಯಕ ಆಕೆಯ ಜತೆ ಅಸಭ್ಯವಾಗಿ ವರ್ತಿಸಿದರು.
ಅವರ ಕಾಮುಕ ವರ್ತನೆಯನ್ನು ಸಹಿಸದೇ ಆಕೆ ವ್ಯಾನ್ ನಿಂದ ಹೊರಗೆ ಜಿಗಿದರು. ಇದರಿಂದ ಆಕೆಗೆ ಗಂಭೀರವಾಗಿ ಗಾಯಗಳಾಗಿದ್ದು ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದರೊಳಗೆ ಸಾವನ್ನಪ್ಪಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ