ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಕ್ಕೆ ಗರ್ಭಿಣಿಯನ್ನು ಪ್ರಿಯತಮ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
									
			
			 
 			
 
 			
					
			        							
								
																	
	
	ಡೋನ್ ಮಂಡಲದ ಯರಗುಂಟಾದಲ್ಲಿ ಈ ಘಟನೆ ನವೆಂಬರ್ 20ರಂದು ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ರಮಿಜಬಿ ಅವರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕು ಕಂಡಿದೆ.
 
									
										
								
																	
	
	ಪತಿಯೊಂದಿಗೆ ವಿಚ್ಚೇಧನ ಪಡೆದಿರುವ ರಮಿಜಬಿ ತನ್ನ ಮಗನ ಜೊತೆ ಪೋಷಕರೊಂದಿಗೆ ವಾಸವಿದ್ದಾಳೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಿಜಬಿಗೆ ಮಾಲೀಕನ ಮಗನೊಂದಿಗೆ ಪ್ರೇಮಾಂಕುರವಾಗಿ ದೈಹಿಕ ಸಂಬಂಧ ಹೊಂದಿದ್ದರು.
 
									
											
									
			        							
								
																	
	
	ಈ ಹಿಂದೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮದುವೆ ಪ್ರಕರಣ ಮಾತುಕತೆಯ ಮೂಲಕ ಬಗೆಹರಿದಿತ್ತು. ಆದರೆ, ಪುನಃ ದೈಹಿಕ ಸಂಬಂಧ ಬೆಳೆಸಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ವಿಚಾರ ತಿಳಿದ ನಂತರ ಮದುವೆ ಪ್ರಸ್ತಾಪ ಮಾಡಿದ್ದ ಗರ್ಭಿಣಿಯನ್ನು ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ರಶೀದ್ ಕತ್ತು ಹಿಸುಕಿ ಕೊಲೆಗೈದಿದ್ದಾನೆ.
 
									
			                     
							
							
			        							
								
																	
	
	ಮಗಳು ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳದಲ್ಲೇ ಶವಪರೀಕ್ಷೆ ನಡೆಸಿ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.
 
									
			                     
							
							
			        							
								
																	
	 
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.