Publish Date: Tue, 05 Dec 2017 (15:26 IST)
Updated Date: Tue, 05 Dec 2017 (15:36 IST)
ಬೆಂಗಳೂರು: ಮಹಿಳೆಯರ ಜತೆ ಯಾವುದೇ ವ್ಯಕ್ತಿ ಅಸಭ್ಯ ವಾಗಿ ವರ್ತಿಸಿದಾಗ ಪೊಲೀಸರು ಬಂದು ರಕ್ಷಣೆ ನೀಡುತ್ತಾರೆ. ಆದರೆ ಇಂದು ರಕ್ಷಣೆ ನೀಡುವ ಪೊಲೀಸ್ ಮಹಿಳಾ ಪೇದೆಗಳ ಜತೆ ಇಬ್ಬರು ವ್ಯಕ್ತಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾದ ರೋಹಿತ್, ವೈಭವ್ ಇಬ್ಬರು ವ್ಯಕ್ತಿಗಳು ಪಬ್ ನಲ್ಲಿ ಕಂಠಪೂರ್ತಿ ಕುಡಿದು ಹೊರಬಂದು ಕರ್ತವ್ಯದಲ್ಲಿದ್ದ ಮಹಿಳಾ ಪೇದೆಗಳ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.
ಹೊಯ್ಸಳ ಗಾಡಿಯ ಒಳಗಿದ್ದ ಮಹಿಳಾ ಪೇದೆಯನ್ನು ಎಳೆದು ಒಬ್ಬ ಅವರ ಮೈಕೈ ಮುಟ್ಟಿ ಕಿರುಕುಳ ನೀಡಿದರೆ, ಇನ್ನೊಬ್ಬ ಹೊಯ್ಸಳದ ಡೋರ್ ತೆಗೆದು ಅಸಭ್ಯವಾಗಿ ವರ್ತಿಸಿದ. ಮಹಿಳಾ ಪೇದೆಗಳ ರಕ್ಷಣೆಗೆ ಬಂದ ಪೇದೆ ಮಂಜಣ್ಣ ಎಂಬುವವರಿಗೆ ‘ಪೊಲೀಸ್ ಆದ್ರೇನು ನಿಮ್ಮನ್ನು ಬಿಡಲ್ಲ’ ಎಂದು ಆವಾಜ್ ಹಾಕಿದ್ದಾರೆ.
ವೈಯಾಲಿಕಾವಲ್ ಠಾಣೆಯಲ್ಲಿ ಪೇದೆ ಮಂಜಣ್ಣ ಅವರು ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ