Select Your Language

Notifications

webdunia
webdunia
webdunia
webdunia

ಅತ್ತಿಗೆಗೆ ಅಶ್ಲೀಲ ವಿಡಿಯೋ ತೋರಿಸಿ ಯಾರಿಲ್ಲ ಬಾ ಅಂದ...!

ಅತ್ತಿಗೆಗೆ ಅಶ್ಲೀಲ ವಿಡಿಯೋ ತೋರಿಸಿ ಯಾರಿಲ್ಲ ಬಾ ಅಂದ...!
ಇಂಧೋರ್ , ಭಾನುವಾರ, 3 ಡಿಸೆಂಬರ್ 2017 (15:01 IST)
ಅತ್ತಿಗೆ ತಾಯಿಯ ಸಮಾನ ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಅತ್ತಿಗೆಗೆ ಅಶ್ಲೀಲ ವಿಡಿಯೋ ತೋರಿಸಿ ಹಾಗೇ ಮಾಡೋಣ ಬಾ ಎಂದು ಒತ್ತಾಯಿಸಿದ ಘಟನೆ ವರದಿಯಾಗಿದೆ. 
ನಗರದ ಲಸೂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಮೈದುನನ ವಿಟಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ವಿವಾಹವಾಗಿ ಪತಿಯ ಮನೆಗೆ ಬಂದಾಗಿನಿಂದಲೂ ಮೈದುನ ನನ್ನ ಮೇಲೆ ಕಾಮದ ಕಣ್ಣು ಇರಿಸಿದ್ದ. ಆದರೆ, ಮಾನ ಮರ್ಯಾದೆಗೆ ಅಂಜಿ ಯಾರಿಗೂ ಹೇಳಿರಲಿಲ್ಲ. ಅದನ್ನೇ ದುರ್ಬಲತೆ ಎಂದುಕೊಂಡ ಮೈದುನ ಮಾಡಬಾರದ್ದನ್ನು ಮಾಡಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
 
ಪತಿ ಉದ್ಯೋಗದ ನಿಮಿತ್ಯ ಬೇರೆ ಉರಿಗೆ ತೆರಳಿದಾಗ ನನ್ನ ಕೋಣೆಗೆ ಬಂದು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಬೇಡವೆಂದರೂ ಕೇಳದೆ ಒತ್ತಾಯಪೂರ್ವಕವಾಗಿ ನೋಡುವಂತೆ ಒತ್ತಾಯಿಸುತ್ತಿದ್ದ. ಒಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದಾಗ ಬಂದು ನಾನು ಹೇಳಿದಂತೆ ಕೇಳು ಇಲ್ಲವಾದ್ರೆ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ. ನಂತರ ಏನೇನು ಮಾಡುಬೇಕೋ ಅದನ್ನೇಲ್ಲಾ ಮಾಡಿದ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
 
ಮಾರನೇ ದಿನವೂ ತನ್ನ ಕಾಮದಾಟವನ್ನು ಮುಂದುವರಿಸಿದೆ. ಆಘಾತಕಾರಿ ವಿಷಯವೆಂದರೆ ತನ್ನ ಪುತ್ರನಿಗೆ ಬುದ್ದಿ ಹೇಳುವ ಬದಲಿಗೆ ನನ್ನ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಸಹಿಸದೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನೊಂದ ಮಹಿಳೆ ತಿಳಿಸಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಮೂಡಿಸಿದ ಹೈಕಮಾಂಡ್ ತಂತ್ರ!