Publish Date: Mon, 27 Nov 2017 (10:08 IST)
Updated Date: Mon, 27 Nov 2017 (10:12 IST)
ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ತೆರಳಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಯಶವಂತಪುರ ಎಸಿಪಿ ರವಿಪ್ರಸಾದ್ ವಿರುದ್ಧ ಆರೋಪ ಕೇಳಿಬಂದಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಾಲ್ಕು ಪುಟಗಳ ದೂರು ನೀಡಿದ್ದಾರೆ.
ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಹೋಗಿದ್ದ ಯುವತಿಗೆ ಕಾಮುಕರು ಎಲ್ಲೆಲ್ಲಿ ಮುಟ್ಟಿದ್ದಾರೆ ತೋರಿಸಿ ಎಂದು ಅಸಭ್ಯವಾಗಿ ಎಸಿಪಿ ವರ್ತಿಸಿದ್ದಾರೆ. ಇನ್ಸಪೆಕ್ಟರ್ ವೆಂಕಟೇಶಗೌಡ ಅವರು ಸಹಕಾರ ನೀಡಿದ್ದಾರೆ. ಎಸಿಪಿ ಅವರು ಹೇಳಿದಂತೆ ಕೇಳು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ಸ್ವೀಕರಿಸದ ಹಿನ್ನೆಲೆ ಡಿಸಿಪಿಗೆ ದೂರು ನೀಡಿದ್ದ ಯುವತಿಗೆ ಎಸಿಪಿಯನ್ನು ಭೇಟಿ ಹೇಳಿದ್ದರು. ಆದ್ದರಿಂದ ಎಸಿಪಿಯನ್ನು ಭೇಟಿ ಮಾಡಿದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.