Publish Date: Thu, 23 Nov 2017 (12:55 IST)
Updated Date: Thu, 23 Nov 2017 (13:17 IST)
ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರೆವಸಗಿದ ಆರೋಪಿ 85 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರಕಾರದ ನಿವೃತ್ತ ಅಧಿಕಾರಿಯಾಗಿರುವ 85 ವರ್ಷದ ವೃದ್ಧ ಆರೋಪಿ ಸತ್ಯನಾರಾಯಣ್, ನಾಲ್ಕು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದು, ಇನ್ನಿಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಲು ಯತ್ನಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಅತ್ಯಾಚಾರವೆಸಗುವುದನ್ನು 85 ವರ್ಷದ ವೃದ್ಧ ಆರೋಪಿ ಕಾಯಕವಾಗಿಸಿಕೊಂಡಿದ್ದ ಪೊಲೀಸ್ ಮೂಲಗಳು ತಿಳಿಸಿವೆ.
ಲೈಂಗಿಕಿ ಕಿರುಕುಳಕ್ಕೊಳಗಾದ ಬಾಲಕಿಯರು ಆರೋಪಿಯ ವರ್ತನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಆರೋಪಿ ಸತ್ಯನಾರಾಯಣ್‌ನನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.