Select Your Language

Notifications

webdunia
webdunia
webdunia
Thursday, 10 April 2025
webdunia

ಲೈಂಗಿಕ ಚಟುವಟಿಕೆ ಕಾನೂನುಬದ್ಧ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

Sex work  SC ಲೈಂಗಿಕ ಕಾರ್ಯಕರ್ತೆ ಸುಪ್ರೀಂಕೋರ್ಟ್
bengaluru , ಗುರುವಾರ, 26 ಮೇ 2022 (18:11 IST)
ಲೈಂಗಿಕ ಚಟುವಟಿಕೆ ಕಾನೂನುಬದ್ಧ ಎಂದು ಘೋಷಿಸಿರುವ ಸುಪ್ರೀಂಕೋರ್ಟ್‌, ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಲಿ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಿದೆ.
ವೇಶ್ಯಾವಾಟಿಕೆ ಎನ್ನುವುದು ವೃತ್ತಿಪರ ಕೆಲಸ. ಲೈಂಗಿಕ ಕಾರ್ಯಕರ್ತೆಯರಿಗೂ ದೇಶದ ಕಾನೂನಿನ ಅಡಿಯಲ್ಲಿ ಸಮಾಜ ಗೌರವ ಹಾಗೂ ಎಲ್ಲರಂತೆ ಸಮಾನ ರೀತಿಯಲ್ಲಿ ಬದುಕುವ ಹಕ್ಕು ಇದೆ ಎಂದು ಹೇಳಿದೆ.
ನ್ಯಾಯಮೂರ್ತಿ ನಾಗೇಶ್ವರ ರಾವ್‌ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧ ಎಂದು ಘೋಷಿಸಿದ್ದು, ಈ ಬಗ್ಗೆ 6  ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.
ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನಿನ ರಕ್ಷಣೆ ದೊರೆಯಬೇಕಿದೆ. ಕ್ರಿಮಿನಲ್‌ ಪ್ರಕರಣವನ್ನು ಘಟನೆ ಹಾಗೂ ವಯಸ್ಸಿನ ಆಧಾರದ ಮೇಲೆ ಎಲ್ಲರ ಮೇಲೂ ದಾಖಲಿಸಬಹುದಾಗಿದೆ. ಒಂದು ವೇಳೆ ವೇಶ್ಯೆ ಅಪ್ರಾಪ್ರರಾಗಿದ್ದರೆ ಅವರಿಗೆ ತಿಳುವಳಿಕೆ ನೀಡಬೇಕೇ ಹೊರತು ಅವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿಯಲ್ಲಿ ಆಸ್ಪತ್ರೆ ಮಾಲೀಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ