Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಪತ್ನಿ, ಮೃತದೇಹ ಸಾಗಿಸಲು ಯಾರೂ ಸಹಾಯಕ್ಕೆ ಬಾರದಿದ್ದಾಗ ಪತಿ ಮಾಡಿದ್ದೇನು ನೋಡಿ, Video

ನಾಗ್ಪುರ ರಸ್ತೆ ಅಪಘಾತ ವೈರಲ್ ವಿಡಿಯೋ

Sampriya

ನಾಗ್ಪುರ , ಸೋಮವಾರ, 11 ಆಗಸ್ಟ್ 2025 (16:08 IST)
ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಪತ್ನಿಯ ನೆರವಿಗೆ ಯಾರೂ ಮುಂದಾಗದೆ ಇದ್ದಾಗ  ಆಕೆಯ ಮೃತದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಮನಕುಲುಕುವ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ. 

ದಂಪತಿಗಳು ನಾಗ್ಪುರದ ಲೋನಾರಾದಿಂದ ಕರಣ್‌ಪುರದ ತಮ್ಮ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಹೈಸ್ಪೀಡ್ ಟ್ರಕ್ ಅವರ  ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪತ್ನಿ ಗ್ಯಾರ್ಸಿ ರಸ್ತೆಯ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ವೇಗವಾಗಿ ಬಂದ ಟ್ರಕ್‌ನಿಂದ ಸಾವನ್ನಪ್ಪಿದ ನಂತರ ನಾಗಪುರದ ವ್ಯಕ್ತಿಯೊಬ್ಬರು ಹೆಂಡತಿಯ ಮೃತ ದೇಹವನ್ನು ತನ್ನ ಮೋಟಾರ್‌ಸೈಕಲ್‌ಗೆ ಕಟ್ಟಿ ಸಾಗಿದ್ದಾರೆ. 

ಆಗಸ್ಟ್ 9 ರಂದು ಮಹಾರಾಷ್ಟ್ರದ ನಾಗ್ಪುರ-ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಆಗಸ್ಟ್ 11 ರ ಸೋಮವಾರದಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತಿ ತನ್ನ ಪತ್ನಿಯ ನಿರ್ಜೀವ ಶವವನ್ನು ಮೋಟಾರ್‌ಸೈಕಲ್‌ನಲ್ಲಿ ಸಾಗಿಸುತ್ತಿರುವುದನ್ನು ನೋಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಾನೆ ಎದುರು ಹುಚ್ಚಾಟ ಮೆರೆಯಲು ಹೋಗಿ ಪ್ರಾಣಪಾಯದಿಂದ ಜಸ್ಟ್‌ ಪಾರಾದ ಪ್ರವಾಸಿಗ, viral video