Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ದಿಡೀರ್ ನಿವೃತ್ತಿ ಘೋಷಿಸಿದ ಚಿನ್ನಮ್ಮ ಶಶಿಕಲಾ

ರಾಜಕೀಯಕ್ಕೆ ದಿಡೀರ್ ನಿವೃತ್ತಿ ಘೋಷಿಸಿದ ಚಿನ್ನಮ್ಮ ಶಶಿಕಲಾ
ಚೆನ್ನೈ , ಗುರುವಾರ, 4 ಮಾರ್ಚ್ 2021 (09:13 IST)
ಚೆನ್ನೈ: ಎಐಡಿಎಂಕೆಗೆ ಬಿಸಿ ತುಪ್ಪವಾಗಿದ್ದ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ರಾಜಕೀಯಕ್ಕೆ ದಿಡೀರ್ ಆಗಿ ನಿವೃತ್ತಿ ಘೋಷಿಸಿದ್ದಾರೆ.


ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಮುಗಿಸಿ ತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ತವರಿಗೆ ಎಂಟ್ರಿ ಕೊಟ್ಟಿದ್ದ ಚಿನ್ನಮ್ಮ ಎಐಡಿಎಂಕೆ ಪಾಲಿಗೆ ಬಿಸಿ ತುಪ್ಪವಾಗಿದ್ದರು. ಮತ್ತೆ ಪಕ್ಷಕ್ಕೆ ಮರಳಲು ಹರಸಾಹಸ ಮಾಡಿದ್ದರು.

ಆದರೆ ಇದೀಗ ಇದ್ದಕ್ಕಿದ್ದಂತೆ ಸಕ್ರಿಯ ರಾಜಕೀಯದಿಂದ ದೂರವುಳಿಯುವ ನಿರ್ಧಾರ ಪ್ರಕಟಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅತ್ತ ಪಕ್ಷದ ವಿರುದ್ಧವೇ ಬಂಡಾಯವೆದ್ದು ಚುನಾವಣೆ ಹೊಸ್ತಲಲ್ಲಿ ತಲೆನೋವಾಗಲಿದ್ದ ಶಶಿಕಲಾ ನಿವೃತ್ತಿ ಘೋಷಿಸಿರುವುದು ಎಐಡಿಎಂಕೆಗೆ ನಿರಾಳ ಉಂಟುಮಾಡಿದೆ.

ಜಯಲಲಿತಾ ಬದುಕಿದ್ದಾಗಲೂ ನಾನು ಅಧಿಕಾರಕ್ಕಾಗಿ ಆಸೆಪಟ್ಟವಳಲ್ಲ. ಎಐಡಿಎಂಕೆ ಈ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರುವುದಷ್ಟೇ ನನ್ನ ಉದ್ದೇಶ. ಎಲ್ಲರೂ ಡಿಎಂಕೆಯನ್ನು ಸೋಲಿಸಲು ಕೈ ಜೋಡಿಸೋಣ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರೋಟ ತಿಂದಿದ್ದಕ್ಕೆ ಗೆಳೆಯನ ಜೀವ ತೆಗೆದ!