Publish Date: Mon, 01 Mar 2021 (09:56 IST)
Updated Date: Mon, 01 Mar 2021 (09:58 IST)
ನವದೆಹಲಿ: ಇಂದಿನಿಂದ ಎರಡನೇ ಹಂತದ ಕೊರೋನಾ ಲಸಿಕೆ ನೀಡುವಿಕೆ ಪ್ರಾರಂಭವಾಗಿದ್ದು, ಪ್ರಧಾನಿ ಮೋದಿ ಬೆಳಿಗ್ಗೆಯೇ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದಾರೆ.
ಇಂದಿನಿಂದ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಲಸಿಕೆ ವಿತರಿಸಲಾಗುತ್ತಿದೆ. ಅದರಂತೆ ಪ್ರಧಾನಿ ಮೋದಿ ಇಂದು ಲಸಿಕೆ ಪಡೆದು ತಮ್ಮ ಟ್ವಿಟರ್ ಪೇಜ್ ನಲ್ಲಿ ದೇಶದ ಜನತೆಗೆ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇನ್ನು, 28 ದಿನಗಳ ಬಳಿಕ ಪ್ರಧಾನಿ ಮೋದಿ ಎರಡನೇ ಹಂತದ ಲಸಿಕೆ ಪಡೆಯಲಿದ್ದಾರೆ. ಲಸಿಕೆ ಪಡೆದ ಬಳಿಕ ಅಲ್ಲಿದ್ದ ನರ್ಸ್ ಗಳ ಜೊತೆ ಕುಶಲೋಪರಿ ನಡೆಸಿದರು.