Select Your Language

Notifications

webdunia
webdunia
webdunia
webdunia

ನಿಮ್ಮ ಪ್ರಧಾನಿ ಭಾರತ ರತ್ನ ಕೊಟ್ಟುಕೊಂಡಿದ್ದರು, ನಾವು ಮೈದಾನಕ್ಕೆ ಹೆಸರಿಟ್ರೆ ತಪ್ಪಾ?!

webdunia
ಅಹಮ್ಮದಾಬಾದ್ , ಗುರುವಾರ, 25 ಫೆಬ್ರವರಿ 2021 (09:35 IST)
ಅಹಮ್ಮದಾಬಾದ್: ವಿಶ್ವದ ಅತೀ ಬೃಹತ್ ಕ್ರೀಡಾಂಗಣವೆನಿಸಿಕೊಂಡ ಮೊಟೆರಾ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರಿನಿಂದ ನಾಮಕರಣ ಮಾಡಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾದರೆ ಮತ್ತೆ ಕೆಲವರು ಹೊಗಳಿಕೆ ನೀಡಿದ್ದಾರೆ.


ಈ ಕ್ರೀಡಾಂಗಣ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ಮೋದಿ ಪಾತ್ರ ದೊಡ್ಡದು. ಅವರು ಖುದ್ದು ಆಸಕ್ತಿ ವಹಿಸಿ ಈ ಮೈದಾನ ನಿರ್ಮಾಣದ ನೇತೃತ್ವ ವಹಿಸಿದ್ದರು. ಹೀಗಾಗಿ ಅವರ ಹೆಸರು ಇಟ್ಟಿದ್ದು ಸರಿಯಾಗಿಯೇ ಇದೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಮೋದಿ ತಮ್ಮ ಹೆಸರನ್ನು ತಾವೇ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ, ಮೋದಿಯ ಕ್ರಿಕೆಟ್ ಜರ್ನಿ ಶುರು ಎಂದು ತಮಾಷೆ ಮಾಡಿದ್ದಾರೆ.

ಇನ್ನು, ಬಿಜೆಪಿ ಸಮರ್ಥಕರು ಕಾಂಗ್ರೆಸ್ ಲೇವಡಿಗೆ ತಿರುಗೇಟು ನೀಡಿದ್ದು, ನಿಮ್ಮ ಪ್ರಧಾನಿಗಳಾದ ಜವಹರ್ ಲಾಲ್ ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲೇ ಭಾರತ ರತ್ನ ಪಡೆದುಕೊಂಡಿದ್ದರು. ಈಗ ಮೋದಿ ಮೈದಾನಕ್ಕೆ ಹೆಸರಿಟ್ಟರೆ ಉರಿಯುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಹೊನಲು ಬೆಳಕಿನಲ್ಲಿ ಟೀಂ ಇಂಡಿಯಾ ಮಿಂಚು