Publish Date: Tue, 02 Mar 2021 (09:13 IST)
Updated Date: Tue, 02 Mar 2021 (09:14 IST)
ನವದೆಹಲಿ: ನಿನ್ನೆಯಿಂದ ಎರಡನೇ ಹಂತದಕೊರೋನಾ ಲಸಿಕೆ ಆರಂಭವಾಗಿದ್ದು, ಗಣ್ಯಾತಿಗಣ್ಯ ನಾಯಕರು ಮೊದಲ ದಿನವೇ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
60 ವರ್ಷ ಮೇಲ್ಪಟ್ಟ ಜನರಿಗೆ ನಿನ್ನೆಯಿಂದ ಲಸಿಕೆ ಕಾರ್ಯಕ್ರಮ ಆರಂಭವಾಗಿದೆ. ಪ್ರಧಾನಿ ಮೋದಿ ಮೊದಲಿಗರಾಗಿ ವ್ಯಾಕ್ಸಿನ್ ಪಡೆದರೆ ಬಳಿಕ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಎನ್ ಸಿಪಿ ನಾಯಕ ಶರದ್ ಪವಾರ್, ಬಿಹಾರ ಸಿಎಂ ನಿತೀಶ್ ಕುಮಾರ್, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಸಚಿವ ಜಗದೀಶ್ ಶೆಟ್ಟರ್, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ, ಶಾಸಕ ಕೆಜಿ ಬೋಪಯ್ಯ ಸೇರಿ ಗಣ್ಯರು ಲಸಿಕೆ ಪಡೆದುಕೊಂಡಿದ್ದಾರೆ.