Publish Date: Sat, 27 Feb 2021 (09:08 IST)
Updated Date: Sat, 27 Feb 2021 (09:10 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ದಿನಾಂಕ ಘೋಷಣೆಯ ಕೆಲವೇ ಕ್ಷಣಗಳ ಮೊದಲು ಸಿಎಂ ಮಮತಾ ಬ್ಯಾನರ್ಜಿ ಪೂಜೆಯಲ್ಲಿ ಭಾಗಿಯಾಗಿದ್ದು, ಕಾರ್ಮಿಕರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ.
ಮೇನಲ್ಲಿ ಚುನಾವಣೆ ಘೋಷಣೆಯಾಗಿದ್ದು, ಇದಕ್ಕೂ ಮೊದಲು ನೀತಿ ಸಂಹಿತ ಜಾರಿಯಾಗಲಿದೆ. ಹೀಗಾಗಿ ದೀದಿ ಇದಕ್ಕೂ ಮೊದಲೇ ಕಾರ್ಮಿಕ ವರ್ಗದವರನ್ನು ಸೆಳೆಯಲು ಕಾರ್ಮಿಕ ವರ್ಗದವರ ಕನಿಷ್ಠ ವೇತನವನ್ನು ಏರಿಕೆ ಮಾಡಿದ್ದಾರೆ. ಇನ್ನು, ಇದಕ್ಕೂ ಮೊದಲು ತಮ್ಮ ನಿವಾಸದಲ್ಲಿ ಹೋಮ ಹವನ ನೆರವೇರಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಾರ್ಥನೆ ಮಾಡಿದ್ದಾರೆ.