Select Your Language

Notifications

webdunia
webdunia
webdunia
webdunia

Video: ಮೋದಿ ಹುಟ್ಟಿದ್ದೂ ಔರಂಗಜೇಬನ ನಾಡಿನಲ್ಲಿ..ಅವನಂತೇ ಮೋದಿಯೂ ಕ್ರೂರಿ: ಸಂಜಯ್ ರಾವತ್ ವಿವಾದ

Sanjay Raut Modi Aurangzeb statement
ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನಾ (UBT) ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ನೇರವಾಗಿ ಮೊಘಲ್ ದೊರೆ ಔರಂಗಜೇಬ್‌ಗೆ ಹೋಲಿಸಿರುವ ರಾವತ್, "ಇಬ್ಬರೂ ಒಂದೇ ಮಣ್ಣಿನಲ್ಲಿ ಹುಟ್ಟಿದವರು" ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
 
ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಶಿವಾಜಿ ಮಹಾರಾಜರು ಮಹಾರಾಷ್ಟ್ರದಲ್ಲಿ ಜನ್ಮತಾಳಿದರೆ, ಔರಂಗಜೇಬ್ ಗುಜರಾತ್‌ನಲ್ಲಿ ಜನಿಸಿದ. ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ಗುಜರಾತ್ ಮಣ್ಣಿನಿಂದ ಬಂದವರು. ಔರಂಗಜೇಬ್ ಎಷ್ಟು ಕ್ರೂರಿಯಾಗಿದ್ದನೋ, ಅದೇ ರೀತಿಯ ಮನಸ್ಥಿತಿಯನ್ನು ಇವರು ಮಹಾರಾಷ್ಟ್ರದ ವಿರುದ್ಧ ಪ್ರದರ್ಶಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಉದ್ಯಮಗಳು ಮತ್ತು ನಾಯಕರನ್ನು ಗುಜರಾತ್ ನಿಯಂತ್ರಿಸುತ್ತಿದೆ ಎಂದು ಆರೋಪಿಸುವ ಭರದಲ್ಲಿ ರಾವತ್ ಈ ಇತಿಹಾಸದ ಉಲ್ಲೇಖವನ್ನು ಪ್ರಧಾನಿ ಮೋದಿಗೆ ಲಿಂಕ್ ಮಾಡಿದ್ದಾರೆ.
 
ಸಂಜಯ್ ರಾವತ್ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿ (BJP) ಮತ್ತು ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
pic.twitter.com/6Yzs4PcpnE

 

— The Jaipur Dialogues (@JaipurDialogues) June 13, 2026

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ