Daily Horoscope

Select Your Language

Notifications

webdunia
webdunia
webdunia
webdunia

ನನ್ನ ಮರಿ ಮೇಲೆಯೇ ದಾಳಿ ಮಾಡ್ತೀಯಾ... ಮೊಸಳೆ ಮೇಲೆ ಸಿಟ್ಟಿಗೆದ್ದ ಅಮ್ಮ ಆನೆ ಮಾಡಿದ್ದೇನು ನೋಡಿ Video

Elephant attacks crorocodile
Photo Credit: X
ನನ್ನ ಮರಿ ಮೇಲೆಯೇ ದಾಳಿ ಮಾಡ್ತೀಯಾ.. ಹೀಗೆಂದು ಸಿಟ್ಟಿಗೆದ್ದ ಅಮ್ಮ ಆನೆ ದೈತ್ಯ ಆಕಾರದ ಮೊಸಳೆಯ ಮೇಲೆ ಪ್ರತಿದಾಳಿ ನಡೆಸಿದ ವಿಡಿಯೋ ಇಲ್ಲಿದೆ ನೋಡಿ.

ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ತಮ್ಮ ಮಕ್ಕಳಿಗೆ ತೊಂದರೆಯಾದರೆ ಸುಮ್ಮನಿರುವವರಲ್ಲ. ಆನೆಗಳೂ ಅದೇ ರೀತಿ. ಮರಿ ಆನೆಯನ್ನು ಎಲ್ಲೇ ಹೋದರೂ ಜೊತೆಗೇ ಕರೆದೊಯ್ಯುತ್ತವೆ. ಆದರೆ ಇಲ್ಲಿ ತನ್ನ ಮರಿಗೆ ತೊಂದರೆಯಾದಾಗ ಅಮ್ಮ ಆನೆಗೆ ಎಷ್ಟು ಸಿಟ್ಟು ಬಂತು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ನದಿ ತಟವೊಂದರಲ್ಲಿ ಮರಿ ಆನೆಯೊಂದು ಆಟವಾಡುತ್ತಿರುತ್ತದೆ. ಈ ವೇಳೆ ನೀರಿನಿಂದ ದಡದ ಬಳಿ ಬರುವ ದೈತ್ಯ ಆಕಾರದ ಮೊಸಳೆ ಮರಿ ಆನೆಯ ಸೊಂಡಿಲು ಹಿಡಿದುಕೊಂಡು ದಾಳಿ ಮಾಡುತ್ತದೆ. ಮರಿ ಆನೆ ಹಾಗೂ ಹೀಗು ಕಷ್ಟಪಟ್ಟು ಸೊಂಡಿಲು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ವೇಳೆ ಮತ್ತೆ ಹಿಡಿಯಲು ನೋಡುತ್ತದೆ.

ಇದನ್ನೆಲ್ಲಾ ಸ್ವಲ್ಪ ದೂರದಿಂದ ನೋಡುತ್ತಿದ್ದ ಅಮ್ಮ ಆನೆಗೆ ಅದೆಲ್ಲಿತ್ತೋ ಸಿಟ್ಟು. ಓಡಿಕೊಂಡು ಬಂದು ಮೊಸೆಳೆಗೆ ಹೊಡೆಯುತ್ತದೆ. ಆದರೆ ಮೊಸಳೆ ಆನೆಯನ್ನು ಕೆಳಕ್ಕೆ ತಳ್ಳಿ ಹಾಕುತ್ತದೆ. ಆದರೂ ಸಾವರಿಸಿಕೊಂಡು ಮೇಲೇಳುವ ಆನೆ ಸೊಂಡಿಲಿನಿಂದ ಮೊಸಳೆಯನ್ನು ಎತ್ತಿ ಬಿಸಾಕುತ್ತದೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/wdquYRdwyn

 

— Pintu Singh (@pintusi11376418) June 12, 2026

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣಿಗಿಂತ ಕಡೆಯಾದಳಾ ಬಡ ಬಾಲಕಿ: ಈಕೆಯ ಬೀದಿ ನಾಯಿ ಪ್ರೇಮ ಅತಿಯಾಯ್ತು ಎಂದು ಕಿಡಿ ಕಾರಿದ ನೆಟ್ಟಿಗರು video