Select Your Language

Notifications

webdunia
webdunia
webdunia
webdunia

ಕೋತಿಗಳ ಮುಂದೆ ಮಂಗನಾಟ ಮಾಡಲು ಹೋದ ಯುವಕನ ಪಾಡು ಮುಂದೇನಾಯ್ತು ನೋಡಿ Video

Viral video monkey
Photo Credit: X
ಕೋತಿಗಳ ಮುಂದೆ ಅವುಗಳ ಮುಖವಾಡ ಧರಿಸಿ ಮಂಗನಾಟವಾಡಲು ಹೋದ ಯುವಕನ ಪಾಡು ಮುಂದೇನಾಯ್ತು ಈ ಫನ್ನಿ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.

ಚೇಷ್ಟೆ ಮಾಡುವುದರಲ್ಲಿ ಮಂಗಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ಅದಕ್ಕೇ ಕಪಿಚೇಷ್ಟೆ ಎಂದೇ ಹೆಸರಿಡಲಾಗಿದೆ. ಅವುಗಳ ಮುಂದೆಯೇ ಚಮಕ್ ಕೊಡಲು ಹೋದರೆ ಅವುಗಳು ಸುಮ್ಮನಿರುತ್ತವೆಯೇ? ಇಲ್ಲಿ ಆಗಿದ್ದೂ ಇದೆ.

ಬೀಚ್ ಗೆ ಹೋಗಿದ್ದ ಕೆಲವು ಯುವಕರಿಗೆ ಅಲ್ಲಿ ಸಾಕಷ್ಟು ಮಂಗಗಳು ಇರುವುದು ಕಂಡುಬಂತು. ಅವುಗಳ ಜೊತೆ ಸ್ವಲ್ಪ ತಮಾಷೆ ಮಾಡೋಣವೆಂದು ಕೋತಿಗಳ ಮುಖವಾಡವನ್ನು ಧರಿಸಿ ಯುವಕನೊಬ್ಬ ಅವುಗಳ ಬಳಿ ಹೋಗಿದ್ದಾನೆ.

ಮೊದಲು ಸುಮ್ಮನಿದ್ದ ಕೋತಿಗಳು ಬಳಿಕ ಯುವಕರನ್ನು ಅಟ್ಟಾಡಿಸಿಕೊಂಡು ಬಂದಿವೆ. ಕೋತಿಗಳು ಅಟ್ಟಾಡಿಸಿಕೊಂಡು ಬರುವಾಗ ಯುವಕ ಮುಖವಾಡ ಕಳಚಿಟ್ಟು ಓಟ ಕಿತ್ತಿದ್ದಾನೆ. ಆದರೂ ಮಂಗಗಳು ಅವರನ್ನು ಬೆನ್ನಟ್ಟಿವೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/1B6KRJgzEA

 

— Riya Ghosh (@Riyaghoshm) June 12, 2026

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಪಾಠ ಕೇಳುವಾಗಲೇ ಕಾಲೇಜಿನ ಮೇಲ್ಛಾವಣಿ ಕುಸಿತ: ಪ್ರಿಯಾಂಕ್ ಖರ್ಗೆ ಇದಕ್ಕೆ ಹೊಣೆ ಎಂದ ಬಿಜೆಪಿ