Daily Horoscope

Select Your Language

Notifications

webdunia
webdunia
webdunia
webdunia

ಪೊಲೀಸರು ಬೆನ್ನಟ್ಟುತ್ತಿದ್ದಾರೆಂದು ಟ್ರಕ್ ನಿಂದ ಹಸುಗಳನ್ನು ರಸ್ತೆಗೆ ಎಸೆದ ಗೋಕಳ್ಳರು: ಮನಕಲಕುವ ವಿಡಿಯೋ

Gurugram cows thrown
Photo Credit: X
ಗುರುಗ್ರಾಮ್‌ನಲ್ಲಿ ಸಿನಿಮೀಯ ಶೈಲಿಯನ್ನು ಮೀರಿಸುವಂತಹ ಭೀಕರ ಮತ್ತು ರೋಮಾಂಚಕ ಘಟನೆಯೊಂದು ನಡೆದಿದೆ. ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಟುಕರನ್ನು ಪೊಲೀಸರು ಮತ್ತು ಗೋರಕ್ಷಕರು ಸತತ 35 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಚಲಿಸುತ್ತಿದ್ದ ವಾಹನದಿಂದಲೇ ಜೀವಂತ ಹಸುಗಳನ್ನು ರಸ್ತೆಗೆ ಎಸೆದ ಘೋರ ಕೃತ್ಯ ಎಸಗಿದ್ದಾರೆ.
 
ಗುರುಗ್ರಾಮ್‌ನ ಮುಖ್ಯ ರಸ್ತೆಯಲ್ಲಿ ಅಕ್ರಮ ಗೋವು ಸಾಗಾಣಿಕೆ ವಾಹನವನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಆರೋಪಿಗಳು ವಾಹನ ನಿಲ್ಲಿಸದೆ ವೇಗವಾಗಿ ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಸ್ಥಳೀಯ ಗೋರಕ್ಷಕರು ವಾಹನವನ್ನು ಬೆನ್ನಟ್ಟಿದ್ದಾರೆ. ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 35 ಕಿಲೋಮೀಟರ್‌ಗಳವರೆಗೆ ಈ ಹೈ-ಸ್ಪೀಡ್ ಚೇಸಿಂಗ್ ನಡೆದಿದೆ.
 
ತಮ್ಮನ್ನು ಬೆನ್ನಟ್ಟುತ್ತಿದ್ದ ಪೊಲೀಸ್ ವಾಹನಗಳನ್ನು ತಡೆಯಲು ಮತ್ತು ರಸ್ತೆ ಬ್ಲಾಕ್ ಮಾಡಲು ಆರೋಪಿಗಳು ಟ್ರಕ್‌ನಲ್ಲಿದ್ದ ಹಸುಗಳನ್ನು ಒಂದೊಂದಾಗಿ ವೇಗವಾಗಿ ಚಲಿಸುತ್ತಿದ್ದ ವಾಹನದಿಂದಲೇ ರಾಷ್ಟ್ರೀಯ ಹೆದ್ದಾರಿಗೆ ಎಸೆದಿದ್ದಾರೆ. ಇದರಿಂದಾಗಿ ರಸ್ತೆಗೆ ಬಿದ್ದ ಹಸುಗಳಿಗೆ ತೀವ್ರ ಗಾಯಗಳಾಗಿವೆ. ಅಷ್ಟೇ ಅಲ್ಲದೆ, ಬೆನ್ನಟ್ಟುತ್ತಿದ್ದವರ ಮೇಲೆ ಆರೋಪಿಗಳು ತಾವಿದ್ದ ವಾಹನದಿಂದಲೇ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ.
 
ಪೊಲೀಸರು ಸತತವಾಗಿ ಪ್ರಯತ್ನಿಸಿ ಆರೋಪಿಗಳ ಟ್ರಕ್ ಟೈರ್ ಅನ್ನು ಪಂಕ್ಚರ್ ಮಾಡುವಲ್ಲಿ ಯಶಸ್ವಿಯಾದರು. ಆದರೂ ಕಟುಕರು ಪಂಕ್ಚರ್ ಆದ ಟೈರ್‌ನಲ್ಲೇ ಮತ್ತಷ್ಟು ದೂರ ವಾಹನ ಚಲಾಯಿಸಿದ್ದಾರೆ. ಅಂತಿಮವಾಗಿ ವಾಹನ ಸಂಪೂರ್ಣವಾಗಿ ನಿಂತಾಗ, ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಜಿಗಿದು ಹಿಡಿದಿದ್ದಾರೆ. ಸದ್ಯ ಹಸುಗಳನ್ನು ರಕ್ಷಿಸಿ ಗೋಶಾಲೆಗೆ ರವಾನಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗಿದೆ.
pic.twitter.com/0OYrVRUtmf

 

— FalconUpdatesHQ (@FalconUpdatesHQ) June 13, 2026

Share this Story:

Follow Webdunia kannada

ಮುಂದಿನ ಸುದ್ದಿ

ಡಾ ಸಿಎನ್ ಮಂಜುನಾಥ್ ಪ್ರಕಾರ ಯಶಸ್ಸಿಗೆ ಬೇಕಾಗಿರುವುದು ಈ ಐದು ಸೂತ್ರಗಳು