Publish Date: Wed, 14 Nov 2018 (07:20 IST)
Updated Date: Wed, 14 Nov 2018 (07:23 IST)
ನವದೆಹಲಿ: ಮೊನ್ನೆ ವಿಧಿ ವಶರಾದ ಸಚಿವ ಅನಂತ ಕುಮಾರ್ ನಿರ್ವಹಿಸುತ್ತಿದ್ದ ಖಾತೆಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲು ಕೇಂದ್ರ ನಿರ್ಧರಿಸಿದೆ.
ಅನಂತ ಕುಮಾರ್ ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸ ಗೊಬ್ಬರ ಖಾತೆ ಇದೀಗ ಕರ್ನಾಟಕದವರೇ ಆದ ಡಿವಿ ಸದಾನಂದ ಗೌಡರ ಪಾಲಾಗಲಿದೆ ಎನ್ನಲಾಗಿದೆ.
ಉಳಿದಂತೆ ಸಂಸದೀಯ ವ್ಯವಹಾರಗಳ ಖಾತೆಯನ್ನೂ ಅನಂತ ಕುಮಾರ್ ನಿರ್ವಹಿಸುತ್ತಿದ್ದರು. ಆ ಖಾತೆಯನ್ನು ಬೇರೆಯವರಿಗೆ ಹಂಚಿಕೆ ಮಾಡುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.