Select Your Language

Notifications

webdunia
webdunia
webdunia
webdunia

ಬಿಜೆಪಿಯ ಬಗ್ಗೆ ಈ ರೀತಿ ಹೇಳುವುದರ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಹೊಗಳಿದ್ರಾ ನಟ ರಜನೀಕಾಂತ್‌

ಬಿಜೆಪಿಯ ಬಗ್ಗೆ ಈ ರೀತಿ ಹೇಳುವುದರ ಮೂಲಕ  ಬಿಜೆಪಿಯನ್ನು ಪರೋಕ್ಷವಾಗಿ ಹೊಗಳಿದ್ರಾ ನಟ ರಜನೀಕಾಂತ್‌
ಚೆನ್ನೈ , ಮಂಗಳವಾರ, 13 ನವೆಂಬರ್ 2018 (12:46 IST)
ಚೆನ್ನೈ : ಬಿಜೆಪಿ , ಮೋದಿ ಬಗ್ಗೆ ಆಗಾಗ ಟೀಕಿಸುತ್ತಿದ್ದ ನಟ ರಜನೀಕಾಂತ್‌, ಇದೀಗ ಬಿಜೆಪಿಯನ್ನು ಪರೋಕ್ಷವಾಗಿ ಹೊಗಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಮೈತ್ರಿಕೂಟ ರಚಿಸುತ್ತಿರುವುದರ ಬಗ್ಗೆ ಪ್ರಶ್ನಿಸುತ್ತಾ, ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡುವಷ್ಟು ಬಿಜೆಪಿ ಕೆಟ್ಟ ಪಕ್ಷವೇ? ಹಾಗೆ ಅವು ಅಂದುಕೊಳ್ಳುತ್ತಿವೆ ಎಂದಾದಲ್ಲಿ ಅದು ಅವರ ದೃಷ್ಟಿಕೋನವಷ್ಟೇ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಹೊಗಳಿದ್ದಾರೆ.


ಅಲ್ಲದೇ ರಜನಿ ಕಾಂತ್  ತಮ್ಮದೇ ಪಕ್ಷ ಸ್ಥಾಪಿಸಿ, ಬಳಿಕ ಚುನಾವಣೆ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಇಲ್ಲವೇ ನೇರವಾಗಿ ಬಿಜೆಪಿಯನ್ನೇ ಸೇರಬಹುದು ಎಂಬ ಊಹಾಪೋಹಗಳು ಕೂಡ ಕೇಳಿಬರುತ್ತಿದ್ದು, ಇದೀಗ ಅವರ ಈ ಹೇಳಿಕೆ ಅದಕ್ಕೆ ಇಂಬುಕೊಡುವಂತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟಿನ ಸಮಯದಲ್ಲಿ ಪ್ಯಾಡ್ ಬದಲು ಟ್ಯಾಂಪನ್ ಬಳಸಿ ಕಾಲನ್ನೆ ಕಳೆದುಕೊಂಡ ಮಾಡೆಲ್