ನವಜೋತ್ ಸಿಧು ತಲೆ ಕಡಿದು ತಂದವರಿಗೆ 5 ಲಕ್ಷ ರೂ. ಬಹುಮಾನ – ಬಜರಂಗದಳದಿಂದ ಘೋಷಣೆ

ಮಂಗಳವಾರ, 21 ಆಗಸ್ಟ್ 2018 (15:07 IST)
ಚಂಡೀಗಡ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಭಾಗವಹಿಸಿದ ಹಿನ್ನಲೆಯಲ್ಲಿ ಇದೀಗ ಆಕ್ರೋಶಗೊಂಡ ಬಜರಂಗದಳ ನವಜೋತ್ ಸಿಂಗ್ ಸಿಧು  ವಿರುದ್ಧ ಘೋಷಣೆಯೊಂದನ್ನು ಮಾಡಿ ವಿವಾದ ಸೃಷ್ಟಿಸಿದ್ದಾರೆ.


ಹೌದು. ಪಾಕಿಸ್ತಾನದಲ್ಲಿ ನಡೆದಿದ್ದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನವಜೋತ್ ಸಿದು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ರನ್ನು ಆತ್ಮೀಯವಾಗಿ ಆಲಂಗಿಸಿದ್ದರು.


ಈ ವಿಚಾರದ ಬಗ್ಗೆ ಮಾತನಾಡಿದ ಬಜರಂಗದಳ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ಜಾಟ್,ಪಾಕ್ ಪ್ರಧಾನಿಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಧು ಪಾಲ್ಗೊಂಡಿದ್ದು, ನಾಚಿಕೆಗೇಡಿನ ವಿಚಾರ. ಹಾಗಾಗಿ ಅವರನ್ನು ಈ ಕೂಡಲೇ ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗೇ ನವಜೋತ್ ಸಿಧು ತಲೆ ಕಡಿದು ತಂದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪರಿಹಾರಕ್ಕಾಗಿ ಉಳುಮೆ ಬಿಟ್ಟು ಕಂಬ ಕಾಯುತ್ತಿರುವ ರೈತರು