Publish Date: Thu, 30 May 2019 (07:08 IST)
Updated Date: Thu, 30 May 2019 (07:09 IST)
ಮುಂಬೈ : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಿಗೆ ಟಿಕ್ ಟಾಕ್ ಮಾಡುವ ಕ್ರೇಜ್ ಹೆಚ್ಚಾಗಿದ್ದು, ಇದೀಗ ಹಾವಿನ ಜೊತೆ ಟಿಕ್ ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ಮುಂಬೈ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಯುವಕರು ಟಿಕ್‍ಟಾಕ್ ನಲ್ಲಿ ಕೈಯಲ್ಲಿ ಹಾವನ್ನು ಹಿಡಿದುಕೊಂಡು ಓಡಾಡಿದ್ದಲ್ಲದೇ, ಹಾವಿಗೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಅರಣ್ಯ ವಿಭಾಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ವಿಭಾಗದ ಅಧಿಕಾರಿಗಳು ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಟಿಕ್ ಟಾಕ್‍ನಲ್ಲಿ ಇಂತಹ ವಿಡಿಯೋ ಮಾಡುವವರ ಹೆಸರನ್ನು ನನಗೆ ಹೇಳಿ ಎಂದು ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.