Webdunia - Bharat's app for daily news and videos

Install App

ಮೋದಿ ತಲೆಗೆ ಗುಂಡು ಹಾರಿಸಿದ್ರೆ ತಪ್ಪೇನು ಎಂದು ಪ್ರಶ್ನಿಸಿದ ಆರ್ ಜೆಡಿ ನಾಯಕ

Krishnaveni K
ಬುಧವಾರ, 20 ಮಾರ್ಚ್ 2024 (12:30 IST)
ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ರಾಜಕೀಯ ನಾಯಕರ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ. ಇದೀಗ ಆರ್ ಜೆಡಿ ನಾಯಕ ಅವಧೇಶ್ ಸಿಂಗ್ ಎಂಬವರು ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸಿದರೆ ತಪ್ಪೇನು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.

ಸ್ವತಃ ಬಿಜೆಪಿಯೇ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅವಧೇಶ್ ಸಿಂಗ್ ಮಾತನಾಡಿರುವ 5 ಸೆಕೆಂಡುಗಳ ವಿಡಿಯೋವನ್ನು ಪ್ರಕಟಿಸಿದ್ದು, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಅಲ್ಲದೆ ಜಾರ್ಖಂಡ್ ನ ಡಿಜಿಪಿ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವಿಪಕ್ಷಗಳಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುವುದು  ಖಚಿತ ಎಂದು ಗೊತ್ತಾಗಿದೆ. ಅದೇ ಹತಾಶೆಯಲ್ಲಿ ಈ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಅಲ್ಲದೆ, ಆರ್ ಜೆಡಿ ನಾಯಕನ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂತಹ ಯಾವುದೇ ಪಿತೂರಿಗಳೂ ಪ್ರಧಾನಿ ಮೋದಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಹೇಳಿದೆ.

ತನ್ನ ಸಂಗಡಿಗರೊಂದಿಗನ ಸಭೆಯಲ್ಲಿ ಅವಧೇಶ್ ಸಿಂಗ್ ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸಿದರೆ ತಪ್ಪೇನು ಎಂದು ಮಾತನಾಡುತ್ತಾರೆ. ಇಂಡಿಯಾ ಬ್ಲಾಕ್ ಸಭೆಯಲ್ಲೇ ಈ ಘಟನೆ ನಡೆದಿದೆ ಎಂದು ಬಿಜೆಪಿ ಆರೋಪವಾಗಿದೆ. ಈ ಘಟನೆ ವಿವಾದಕ್ಕೆ ಸೃಷ್ಟಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments