Select Your Language

Notifications

webdunia
webdunia
webdunia
webdunia

ಸದಾನಂದ ಗೌಡರಿಗೆ ಕಾಂಗ್ರೆಸ್ ಆಹ್ವಾನ: ಇಂದು ತೀರ್ಮಾನ

DV Sadananda Gowda
ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಹಾಲಿ ಸಂಸದ, ಬಿಜೆಪಿ ನಾಯಕ ಡಿವಿ ಸದಾನಂದ ಗೌಡ ಕಾಂಗ್ರೆಸ್ ನಿಂದ ಆಹ್ವಾನ ಬಂದಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ನಿಂದ ಆಹ್ವಾನ ಬಂದಿರುವುದು ನಿಜ. ನನ್ನ ರಾಜಕೀಯ ಭವಿಷ್ಯ ಏನೆಂದು ತೀರ್ಮಾನ ಮಾಡುವುದಾಗಿ ಸದಾನಂದ ಗೌಡರು ಹೇಳಿದ್ದಾರೆ. ಬೇರೆ ಬೇರೆಯವರು ನನ್ನನ್ನು ಸಂಪರ್ಕ ಮಾಡಿರುವುದು ನಿಜ. ನಮ್ಮ ಪಕ್ಷದ ಪ್ರಮುಖರೂ ನನ್ನಲ್ಲಿ ಬಂದು ಸಮಾಲೋಚನೆ ಮಾಡಿರುವುದೂ ಸತ್ಯ ಎಂದಿದ್ದಾರೆ.

ಡಿಕೆ ಶಿವಕುಮಾರ್ ಈ ಮೊದಲು ಬಿಜೆಪಿಯ ಮಾಜಿ ಸಿಎಂ ಒಬ್ಬರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಇದೀಗ ಕಾಂಗ್ರೆಸ್ಸಿಗರು ಸಂಪರ್ಕಿಸಿರುವುದು ಸತ್ಯ ಎಂದಿದ್ದಾರೆ. ಆ ಮೂಲಕ ಡಿಕೆಶಿ ಮಾತು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮನಸ್ಸು ಮತ್ತು ಮನೆಯವರನ್ನು ಕೇಳಿ ಮುಂದಿನ ನಿರ್ಣಯ ತಿಳಿಸುತ್ತೇನೆ ಎಂದಿದ್ದಾರೆ.

ಇಂದು ಸದಾನಂದ ಗೌಡ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಅಥವಾ ರಾಜಕೀಯ ನಿವೃತ್ತಿಯಾಗುತ್ತಾರೋ ಎಂದು ಇಂದು ತೀರ್ಮಾನ ಕೈಗೊಳ‍್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮೇಲೆ ಬೇಸರಗೊಂಡ ಎಚ್ ಡಿ ಕುಮಾರಸ್ವಾಮಿ