Select Your Language

Notifications

webdunia
webdunia
webdunia
webdunia

ಅಸೆಂಬ್ಲಿಯಲ್ಲಿ ರೀನಾ ಕಶ್ಯಪ್ ಒಬ್ರೆ ಮಹಿಳಾ ಶಾಸಕಿ

ಅಸೆಂಬ್ಲಿಯಲ್ಲಿ ರೀನಾ ಕಶ್ಯಪ್ ಒಬ್ರೆ ಮಹಿಳಾ ಶಾಸಕಿ
ಶಿಮ್ಲಾ , ಶುಕ್ರವಾರ, 9 ಡಿಸೆಂಬರ್ 2022 (07:27 IST)
ಶಿಮ್ಲಾ : ಇಂದು ಹಿಮಾಚಲ ಪ್ರದೇಶ ವಿಧಾನಸಭೆಯ ಫಲಿತಾಂಶವು ಪ್ರಕಟವಾಗಿದ್ದು, ಕಾಂಗ್ರೆಸ್ ಬಹುಮತ ಪಡೆದಿದೆ.

ಆದರೆ 68 ಸದಸ್ಯ ಬಲದ ಈ ವಿಧಾನಸಭೆಯಲ್ಲಿ ಓರ್ವ ಮಹಿಳೆ ಮಾತ್ರ ಶಾಸಕಿಯಾಗಿ ಆಯ್ಕೆ ಆಗಿದ್ದಾರೆ. ಹಿಮಾಚಲ ಪ್ರದೇಶದ ವಿಧಾನಸಭೆಯ ಚುನಾವಣೆಯು ನ. 12ರಂದು ನಡೆಯಿತು. ಈ ವೇಳೆ 24 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಬಿಜೆಪಿಯಿಂದ 6, ಆಪ್ನಿಂದ 5 ಹಾಗೂ ಕಾಂಗ್ರೆಸ್ನಿಂದ ಮೂವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ರೀನಾ ಕಶ್ಯಪ್ ಮಾತ್ರ ಗೆಲುವು ಸಾಧಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಅಮಲಿನಲ್ಲಿ‌ ಸ್ನೇಹಿತನ ಕೊಲೆ