Publish Date: Sat, 20 Aug 2022 (12:33 IST)
Updated Date: Sat, 20 Aug 2022 (12:37 IST)
ಭಾರೀ ಮಳೆಗೆ ರೈಲ್ವೆ ಸೇತುವೆ ಕುಸಿತ! Railway bridge collapsed due to heavy rain!
ಭಾರೀ ಮಳೆ, ಹಿಮಾಚಲ ಪ್ರದೇಶ, ರೈಲ್ವೆ Heavy rain, Himachal Pradesh, Railways
ಶಿಮ್ಲಾ : ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ ಶನಿವಾರ ಕುಸಿದಿದೆ.
ಹಿಮಾಚಲ ಪ್ರದೇಶದಲ್ಲಿರುವ ಬಲ್ಹ್, ಸದರ್, ಥುನಾಗ್, ಮಂಡಿ, ಲಮಾಥಾಚ್ ಸ್ಥಳಗಳಲ್ಲಿ ಧಾರಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಶಾಲೆಗಳಿಗೆ ಶನಿವಾರ ರಜೆಯನ್ನು ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ಅವರು ಘೋಷಿಸಿದ್ದರು.
ಕಳೆದೆರಡು ದಿನಗಳಿಂದ ಮಂಡಿಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.