Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಭಾರೀ ಮಳೆ ಮುನ್ಸೂಚನೆ ...

ರಾಜಧಾನಿಯಲ್ಲಿ ಭಾರೀ ಮಳೆ ಮುನ್ಸೂಚನೆ ...
ಬೆಂಗಳೂರು , ಬುಧವಾರ, 3 ಆಗಸ್ಟ್ 2022 (14:07 IST)
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬುಧವಾರದಿಂದ ಆಗಸ್ಟ್ 7ರವರೆಗೆ ಮುಂಗಾರಿನ ಅಬ್ಬರ ಕಂಡು ಬರಲಿದೆ. ಈ ಐದು ದಿನ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ವ್ಯಾಪಕ ಮಳೆ ಆಗಲಿದೆ.
 
ಬೆಳಗ್ಗೆಯಿಂದ ಮೋಡ ಮುಸುಕಿನ ವಾತಾವರಣ ಕಂಡು ಬಂದು, ಮಧ್ಯಾಹ್ನದ ನಂತರ ಮಳೆ ಸುರಿಯುವ ಸಾಧ್ಯತೆ ಇದೆ. ನಗರದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ, ಇನ್ನು ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬರಲಿದೆ.
 
 
ಆಗಸ್ಟ್ 5ಮತ್ತು 6ರಂದು ನಗರದಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಂದು ಭಾರೀ ಮಳೆಯಿಂದ ಅತೀ ಭಾರೀ ಮಳೆ ಆಗುವ ಸಂಭವವಿದೆ. ಆ ಎರಡು ಬೆಂಗಳೂರಿಗೆ ಕ್ರಮವಾಗಿ 'ಯೆಲ್ಲೋ ಅಲರ್ಟ್' ಮತ್ತು 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ವ್ಯಾಪಕ ಮಳೆ ಮುನ್ನೆಚ್ಚರಿಕೆ ಪಡೆದ ಈ ಐದಿನದಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ದರ್ಶನ ಅಷ್ಟಕಷ್ಟೆ ಎನ್ನಬಹುದು. ಈ ವೇಳೆ ತಂಪು ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವ ಇದೆ.
 
ವ್ಯಾಪಕ ಮಳೆ ಮುನ್ನೆಚ್ಚರಿಕೆ ಪಡೆದ ಈ ಐದಿನದಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ದರ್ಶನ ಅಷ್ಟಕಷ್ಟೆ ಎನ್ನಬಹುದು. ಈ ವೇಳೆ ತಂಪು ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವ ಇದೆ.
 
ಹವಾಮಾನ ವೈಪರಿತ್ಯ ಕಾರಣಕ್ಕೆ ವ್ಯಾಪಕ ಮಳೆ; ಛತ್ತೀಸ್‌ಗಢ ತಮಿಳುನಾಡು ಮಾರ್ಗವಾಗಿ ಕನ್ಯಾಕುಮಾರಿ ವರೆಗೆ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಅದು ಸಮುದ್ರ ಮಟ್ಟದಿಂದ 900ಮೀಟರ್ ಎತ್ತರವಿದೆ. ಇನ್ನು ತಮಿಳುನಾಡು -ಆಂಧ್ರಪ್ರದೇಶದ ಕರಾವಳಿ ಮತ್ತು ಬಂಗಾಳಕೊಲ್ಲಿಯಲ್ಲಿ ಭಾಗದಲ್ಲಿ ಗಾಳಿ ತೀವ್ರತೆ ಹೆಚ್ಚಾಗಿದೆ. ಈ ಕಾರಣಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿ ಮತ್ತು ವಿಜ್ಞಾನಿ ಪ್ರಸಾದ್ ವಿವರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥ!