ಬೆಂಗಳೂರಿನಲ್ಲಿ ಹಲವೆಡೆ ನಿನ್ನೆ ರಾತ್ರಿ ಭಾರೀ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಪೈಕಿ ಎರಡು ತಿಂಗಳ ಹಿಂದೆಯಷ್ಟೆ ಸಂಪೂರ್ಣ ಜಲಾವೃತವಾಗಿದ್ದ ಸಾಯಿ ಲೇಔಟ್ ಕೂಡ ಒಂದು. ಇಲ್ಲಿನ ಜನರ ಬೇಸರದ ಸಂಗತಿ ಏನೆಂದರೆ, ಈ ಪ್ರದೇಶಕ್ಕೆ ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಸಮಸ್ಯೆಯನ್ನು ನಿರ್ಲಕ್ಷಿಸಿ, ನೀಡಿದ ಭರವಸೆಯನ್ನು ಭರವಸೆಯಾಗಿಯೇ ಉಳಿಸಿದ ಪರಿಣಾಮ ನಿನ್ನೆ ಮತ್ತೆ ಸಾಯಿ ಲೇಔಟ್ ಜಲಾವೃತಗೊಂಡಿದೆ. ಅಲ್ಲದೆ ನಿರಂತರ ಮಳೆಯಾಗುತ್ತಿರುವುದರಿಂದ ಮನೆಯೊಳಗೆ ಪದೇಪದೇ ನೀರು ನುಗ್ಗುತ್ತಿದೆ. ಸಾಯಿ ಲೇಔಟ್ ಮತ್ತೆ ಜಲಾವೃತಗೊಂಡ ಹಿನ್ನೆಲೆ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ನಗರದಲ್ಲಿ ಸುರಿದ ಭಾರೀ ಮಳೆಯಿಂದ ಮರದ ರೆಂಬೆ ಮುರಿದುಬಿದ್ದ ಘಟನೆ ಮೇಖ್ರಿ ಸರ್ಕಲ್ನ ಸ್ಕೈವಾಕ್ ಬಳಿ ನಡೆದಿದೆ. ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯ್ತು..ಏರ್ ಪೋರ್ಟ್ ಕಡೆ ಹೋಗ್ತಿದ್ದ ಜನರಿಗೆ ಟ್ರಾಫಿಕ್ ಜಾಮ್ನಿಂದ ಕಿರಿಕಿರಿ ಉಂಟಾಯ್ತು.