ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಪುನೀತ್ ರಾಜ್ ಕುಮಾರ್ ಸಾವಿನ ಸಂದರ್ಭವನ್ನು ಉಲ್ಲೇಖಿಸಿ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿವಾದಕ್ಕೆ ಸಿಲುಕಿದ್ದಾರೆ.
									
			
			 
 			
 
 			
			                     
							
							
			        							
								
																	ನಮ್ಮ ಮುಖ್ಯಮಂತ್ರಿಗಳಿಗೆ ಶಾಸಕರು ಕೆಲಸವಾಗಬೇಕೆಂದು ಹೋದರೆ ಫೈಲ್ ನೋಡಲೂ ಪುರುಸೊತ್ತಿರಲ್ಲ. ಆದರೆ ಅವರಿಗೆ ಎಲ್ಲಾ ಸಿನಿಮಾಗಳನ್ನು ನೋಡಲು ಕಣ್ಣೀರು ಹಾಕಲು ಸಮಯವಿರುತ್ತದೆ. ಒಬ್ಬ ನಟ ತೀರಿಕೊಂಡಾಗ ಮೂರು ದಿನ ಅಲ್ಲೇ ಕೂರಲು ಅವರಿಗೆ ಸಮಯವಿತ್ತು ಎಂದು ಪುನೀತ್ ಸಾವಿನ ದಿನವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು.
									
										
								
																	ಇದು ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪುನೀತ್ ರಂತಹ ನಟನ ಹೆಸರನ್ನು ನಿಮ್ಮ ರಾಜಕೀಯಕ್ಕೆ ಯಾಕೆ ಬಳಸಿಕೊಂಡಿರಿ ಎಂದು ಅಪ್ಪು ಫ್ಯಾನ್ಸ್ ಸೂಲಿಬೆಲೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸೂಲಿಬೆಲೆ ಕ್ಷಮೆ ಯಾಚಿಸಿದ್ದಾರೆ.