Publish Date: Mon, 25 Jul 2022 (16:22 IST)
Updated Date: Mon, 25 Jul 2022 (16:25 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಇಂದು ಲಾಂಚ್ ಆಗಿದೆ.
ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ನಲ್ಲಿ ಕೊನೆಯಲ್ಲಿ ದೇವರು ಮರಳಿ ಬರುತ್ತಿದ್ದಾರೆ ಎನ್ನಲಾಗಿದ್ದು, ಪುನೀತ್ ಅಭಿಮಾನಿಗಳನ್ನು ಭಾವುಕರಾಗಿಸಿದೆ.
ಡಾರ್ಲಿಂಗ್ ಕೃಷ್ಣ-ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾದಲ್ಲಿ ಪುನೀತ್ ನಾಯಕನ ಜೀವನ ಸರಿಮಾಡಲು ಬರುವ ದೇವ ಮಾನವನಂತೆ ಚಿತ್ರಿಸಲಾಗಿದೆ. ಜೊತೆಗೆ ಪ್ರಭುದೇವ ಜೊತೆಗಿನ ನೃತ್ಯದ ತುಣುಕನ್ನೂ ನೀಡಲಾಗಿದೆ.