Select Your Language

Notifications

webdunia
webdunia
webdunia
webdunia

ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ : ಶರೀಫ್

ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ : ಶರೀಫ್
ಇಸ್ಲಮಾಬಾದ್ , ಶನಿವಾರ, 20 ಆಗಸ್ಟ್ 2022 (11:45 IST)
ಇಸ್ಲಮಾಬಾದ್ : ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯವನ್ನು ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ.

ಯುಎನ್ಎಸ್ಸಿ (ವಿಶ್ವಸಂಸ್ಥೆಯ ಭದ್ರತಾ ಮಂಡಳಿ) ನಿರ್ಣಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಪಾಕಿಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಆಸ್ಟ್ರೇಲಿಯಾದ ಹೈ ಕಮಿಷನರ್ ನೀಲ್ ಹಾಕಿನ್ಸ್ ಅವರು ಇಸ್ಲಾಮಾಬಾದ್ನಲ್ಲಿ ತಮ್ಮನ್ನು ಭೇಟಿಯಾಗಿ ಸಭೆ ನಡೆಸಿದ ಸಂದರ್ಭದಲ್ಲಿ ಶೆಹಬಾಜ್ ಈ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಂತರರಾಷ್ಟ್ರೀಯ ಸಮುದಾಯವು ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕು ಎಂದು ಎಂದು ಪಾಕ್ ಪ್ರಧಾನಿ ಒತ್ತಿ ಹೇಳಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಸೂಪರ್‌ ಪವರ್‌ ಆಗಲಿದೆ : ಆದಿತ್ಯನಾಥ್‌