Publish Date: Tue, 06 Dec 2022 (15:06 IST)
Updated Date: Tue, 06 Dec 2022 (17:08 IST)
ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆ ಶತಾಯಗತಾಯ ಗೆಲ್ಲಲೇಬೇಕು ಎಂದು ರಣತಂತ್ರ ಎಣೆದಿದ್ದು, ಎರಡು ಮಾಸ್ಟರ್ ಪ್ಲ್ಯಾನ್ ಪ್ರಯೋಗಕ್ಕೆ ಸಜ್ಜಾಗಿದೆ.
ಎರಡು ರಾಜ್ಯದಲ್ಲಿ ಬಿಜೆಪಿ ಗೆದ್ರೆ ಗುಜರಾತ್, ಹಿಮಾಚಲ ಮಾದರಿಯಲ್ಲಿ ಚುನಾವಣೆ ತಂತ್ರ ಹೆಣೆಯೋದು. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥರಿಂದ ಅತಿ ಹೆಚ್ಚು ರಾಲಿಗಳನ್ನ ಕರ್ನಾಟಕದಲ್ಲೂ ಮಾಡೋದು.
ಹಿರಿಯ ತಲೆಗಳಿಗೆ ಕೊಕ್ ಕೊಟ್ಟು ಯುವಕರಿಗೆ ಚುನಾವಣೆಯಲ್ಲಿ ಆದ್ಯತೆ ಕೊಡೋದು. ಕೆಲಸ ಮಾಡದೇ ಜನ ವಿರೋಧಿ ಹೆಸರು ಇರೋ ಹಾಲಿ ಎಂಎಲ್ಎ ಗಳಿಗೆ ಟಿಕೆಟ್ ಕಟ್ ಮಾಡಿ ಹೊಸಬರಿಗೆ ಅವಕಾಶ ಕೊಡೋದು.