Select Your Language

Notifications

webdunia
webdunia
webdunia
webdunia

ರಸ್ನಾ ಸೃಷ್ಟಿಕರ್ತ ಅರೀಜ್ ಪಿರೋಜ್‍ಶಾ ಖಂಬಟ್ಟಾ ನಿಧನ

ರಸ್ನಾ ಸೃಷ್ಟಿಕರ್ತ ಅರೀಜ್ ಪಿರೋಜ್‍ಶಾ ಖಂಬಟ್ಟಾ ನಿಧನ
ಗಾಂಧೀನಗರ , ಮಂಗಳವಾರ, 22 ನವೆಂಬರ್ 2022 (10:46 IST)
ಗಾಂಧೀನಗರ : ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೈಗಾರಿಕೋದ್ಯಮಿ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು ನವೆಂಬರ್ 19 ರಂದು ಸೋಮವಾರ ಅಹಮದಾಬಾದ್ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು, ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ, ರುಜಾನ್, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ದಶಕಗಳ ಹಿಂದೆ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರ ತಂದೆ ಫಿರೋಜಾ ಖಂಬಟ್ಟಾ ಅವರು ಸಾಮಾನ್ಯ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ ಈ ವ್ಯಾಪಾವನ್ನು 60 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವಕ್ಕೆ ತಂದು ಜನಪ್ರಿಯಗೊಳಿಸಿ, ವಿಶ್ವದ ಅತಿದೊಡ್ಡ ಕೇಂದ್ರೀಕೃತ ತಯಾರಕರಾಗಿ ಗುರುತಿಸಿಕೊಂಡರು. 


Share this Story:

Follow Webdunia kannada

ಮುಂದಿನ ಸುದ್ದಿ

ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ