Select Your Language

Notifications

webdunia
webdunia
webdunia
webdunia

ಮಾತಾ ಅಮೃತಾನಂದಮಯಿ ಅವರ ತಾಯಿ ವಿಧಿವಶ

ಅಮೃತಾನಂದಮಯಿ
ತಿರುವನಂತಪುರಂ , ಮಂಗಳವಾರ, 20 ಸೆಪ್ಟಂಬರ್ 2022 (13:09 IST)
ತಿರುವನಂತಪುರಂ : ಮಾತಾ ಅಮೃತಾನಂದಮಯಿ ಅವರ ತಾಯಿ ದಮಯಂತಿ (97) ಅವರು ನಿಧನರಾಗಿದ್ದಾರೆ.

ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ದಮಯಂತಿ ಅವರು ಕೊನೆಯುಸಿರೆಳೆದಿದ್ದು, ಮಂಗಳವಾರ ಸಂಜೆ 4 ಗಂಟೆಗೆ ಅಮೃತಪುರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದಮಯಂತಿ ಅವರು ಕೊಲ್ಲಂನ ಅಮೃತಪುರಿ ಎಡಮ್ಮನ್ನೆಲ್ನ ದಿವಂಗತ ಸುಗುಣಂದನ್ ಅವರ ಪತ್ನಿಯಾಗಿದ್ದು, ಇದೀಗ ಕಸ್ತೂರಿ ಭಾಯಿ, ಸುಭಗನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್ ಅವರ ಇತರ ಮಕ್ಕಳನ್ನು ಅಗಲಿದ್ದಾರೆ. 

ದಮಯಂತಿ ಅವರ ನಿಧನಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು?