ಪಾಟ್ನಾ : ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್(59) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಈ ಹಿಂದೆ ಸುಭಾಷ್ ಸಿಂಗ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆಗಸ್ಟ್ 16ರ ಮಂಗಳವಾರ ಬೆಳಗ್ಗೆ 11:30ಕ್ಕೆ ನಿತೀಶ್-ತೇಜಸ್ವಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಮುನ್ನವೇ ಸುಭಾಷ್ ಸಿಂಗ್ ಕೊನೆಯುಸಿರೆಳೆದಿರುವ ಸುದ್ದಿ ತಿಳಿದು ಬಂದಿದೆ.