Select Your Language

Notifications

webdunia
webdunia
webdunia
webdunia

ಅತ್ಯಾಚಾರಿಯನ್ನು ಹೊಡೆದು ಕೊಂದು ಆಕ್ರೋಶ ತೀರಿಸಿಕೊಂಡ ಮಹಿಳೆಯರು

ಅತ್ಯಾಚಾರಿಯನ್ನು ಹೊಡೆದು ಕೊಂದು ಆಕ್ರೋಶ ತೀರಿಸಿಕೊಂಡ ಮಹಿಳೆಯರು
ತ್ರಿಪುರಾ , ಗುರುವಾರ, 17 ಮಾರ್ಚ್ 2022 (10:00 IST)
ತ್ರಿಪುರಾ: 5 ವರ್ಷದ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮದ ಮಹಿಳೆಯರೇ ಹೊಡೆದು ಕೊಂಡ ಘಟನೆ ತ್ರಿಪುರಾದಲ್ಲಿ ನಡೆದಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆ ಮುಗಿಸಿ ಬಂದಿದ್ದ 46 ವರ್ಷದ ಆರೋಪಿ ತನ್ನ ತಾಯಿಯೊಂದಿಗೆ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಐದು ವರ್ಷದ ಬಾಲಕಿಯನ್ನು ಪುಸಲಾಯಿಸಿ ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಾಲಕಿ ಕಿರುಚಾಟ ಕೇಳಿ ಸ್ಥಳೀಯರು ಹೋದಾಗ ಬಾಲಕಿ ಬಟ್ಟೆ ಹರಿದಿತ್ತು ಮತ್ತು ನೋವಿನಿಂದ ನರಳುತ್ತಿದ್ದಳು.

ಘಟನೆ ನಡೆದ ಮರುದಿನವೇ ಆತನನ್ನು ಹಿಡಿದ ಗ್ರಾಮದ ಮಹಿಳೆಯರು ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಡ್ಜ್‌ನಲ್ಲಿ ಪತ್ನಿಯ ಕಾಲು ಕತ್ತರಿಸಿದ ಪತಿ!