Publish Date: Wed, 16 Mar 2022 (10:00 IST)
Updated Date: Wed, 16 Mar 2022 (10:06 IST)
ನವದೆಹಲಿ: ನಾಯಿಗಳ ಸ್ವಭಾವವೇ ಬೊಗಳುವುದು. ಆದರೆ ಇಲ್ಲೊಬ್ಬ ನಾಯಿಯ ಬೊಗಳುವಿಕೆಯಿಂದ ಕಿರಿ ಕಿರಿಯಾಗುತ್ತಿದೆಂದು ಕೊಲೆ ಮಾಡಿದ ಘಟನೆ ನಡೆದಿದೆ.
ದೆಹಲಿಯಲ್ಲಿ ವ್ಯಕ್ತಿಯೋರ್ವ ಸದಾ ಬೊಗಳುತ್ತಿದ್ದ ಬೀದಿ ನಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಾಯಿಯ ಕಿರಿ ಕಿರಿ ತಾಳಲಾರದೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಾಯಿ ಹಗಲು-ರಾತ್ರಿ ಸದಾ ಬೊಗಳುತ್ತಿತ್ತು. ಇದರಿಂದಾಗಿ ನೆಮ್ಮದಿಯಾಗಿ ಮನೆಯಲ್ಲಿ ಮಲಗಲೂ ಸಾಧ‍್ಯವಾಗುತ್ತಿರಲಿಲ್ಲ. ಹೀಗಾಗಿ ಅದನ್ನು ಚಾಕುವಿನಿಂದ ಇರಿದು ಕೊಂದಿರುವುದಾಗಿ ಹೇಳಿದ್ದಾನೆ. ಈ ಸಂಬಂಧ ದೆಹಲಿ ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.