Select Your Language

Notifications

webdunia
webdunia
webdunia
webdunia

ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ!

ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ!
ನವದೆಹಲಿ , ಬುಧವಾರ, 16 ಮಾರ್ಚ್ 2022 (09:57 IST)
ಬೀಜಿಂಗ್ : ಕಳೆದ 2 ತಿಂಗಳು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಾಡಿದ್ದ ಮಾರಕ ಒಮಿಕ್ರೋನ್ ರೂಪಾಂತರಿ ವೈರಸ್ ಇದೀಗ ಚೀನಾ ಮತ್ತು ದಕ್ಷಿಣಾ ಕೊರಿಯಾ ದೇಶಗಳನ್ನು ಮತ್ತಷ್ಟುಆವರಿಸಿಕೊಂಡಿದ್ದು ಭಾರೀ ಸೋಂಕು,

ಸಾವಿಗೆ ಕಾರಣವಾಗಿದೆ. ಚೀನಾದಲ್ಲಿ ಮಂಗಳವಾರ 5280 ಹೊಸ ಕೇಸು ದೃಢಪಟ್ಟಿದೆ. ಇದು ಸೋಮವಾರ ದಾಖಲಾಗಿದ್ದ ಪ್ರಮಾಣಕ್ಕಿಂತ ದ್ವಿಗುಣ.

ಸೋಂಕು ನಿಗ್ರಹ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಪ್ರದರ್ಶಿಸುತ್ತಿದ್ದರೂ, ಹೊಸ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯವಾಗದೇ ಇರುವುದು ಸರ್ಕಾರವನ್ನು ಆತಂಕಕ್ಕೆ ಗುರಿ ಮಾಡಿದೆ.

ಅದರಲ್ಲೂ ಸ್ಥಳೀಯವಾಗಿ ಹಬ್ಬುತ್ತಿರುವ ಪ್ರಕರಣಗಳೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 13 ನಗರಗಳನ್ನು ಪೂರ್ಣ ಲಾಕ್ಡೌನ್ಗೆ ಒಳಪಡಿಸಲಾಗಿದೆ. ಹೀಗೆ ಲಾಕ್ಡೌನ್ಗೆ ಒಳಪಟ್ಟನಾಗರಿಕರ ಸಂಖ್ಯೆ 3 ಕೋಟಿಯಷ್ಟಿದೆ.

ಇದಲ್ಲದೇ ಹಲವು ನಗರಗಳನ್ನು ಭಾಗಶಃ ನಿರ್ಬಂಧಕ್ಕೆ ಒಳಪಡಿಸಲಾಗಿದ್ದು, ಸೀಮಿತ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಇದುವರೆಗೂ 1.16 ಲಕ್ಷ ಜನರಿಗೆ ಸೋಂಕು ತಗುಲಿದೆ, 3636 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನಿಂದ ಬಂದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್