Publish Date: Thu, 17 Mar 2022 (09:50 IST)
Updated Date: Thu, 17 Mar 2022 (09:55 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿಯೊಬ್ಬರ ಸಹೋದರ ಕೀರ್ತಿ ಚಂದ್ರ ಎಂಬವರು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಾದಿ. ಕಾಂ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ತಾನು ಖ್ಯಾತ ನಟಿಯ ಸಹೋದರ, ಉತ್ತಮ ಕೆಲಸದಲ್ಲಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದ. ಬಳಿಕ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಚ್ಯಾಟಿಂಗ್ ಮಾಡುತ್ತಿದ್ದರು. ಆತನ ಹುಟ್ಟುಹಬ್ಬಕ್ಕೆ ಲ್ಯಾಪ್ ಟಾಪ್, ದುಬಾರಿ ವಾಚ್, ಐಫೋನ್ ಇತ್ಯಾದಿ ದುಬಾರಿ ಉಡುಗೊರೆಗಳನ್ನು ಯುವತಿ ನೀಡಿದ್ದಳು.
ಇದೇ ಸಲುಗೆಯಿಂದ ಜನವರಿಯಲ್ಲಿ ಯುವತಿಯನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ಭರವಸೆ ಕೊಟ್ಟು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದ. ಬಳಿಕ ಆಕೆಯನ್ನು ಅವಾಚ್ಯವಾಗಿ ನಿಂದಿಸಿ ನಾಪತ್ತೆಯಾಗಿದ್ದ. ಇದೀಗ ಯುವತಿ ಆತನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.