Webdunia - Bharat's app for daily news and videos

Install App

ಮುಂದಿನ ಮೂರು ವಾರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದ ಟ್ರಸ್ಟ್: ಕಾರಣ ಇಲ್ಲಿದೆ

ಮುಂದಿನ ಮೂರು ವಾರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದ ಟ್ರಸ್ಟ್: ಕಾರಣ ಇಲ್ಲಿದೆ
Krishnaveni K
ಮಂಗಳವಾರ, 28 ಜನವರಿ 2025 (16:11 IST)
ಅಯೋಧ್ಯೆ: ಮುಂದಿನ ಎರಡು ಅಥವಾ ಮೂರು ವಾರ ಆದಷ್ಟು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದು ರಾಮಜನ್ಮಭೂಮಿ ಟ್ರಸ್ಟ್ ಸ್ಥಳೀಯರಿಗೆ ಸೂಚನೆ ನೀಡಿದೆ. ಇದಕ್ಕೆ ಕಾರಣವೂ ಇದೆ.

ಕಳೆದ ವರ್ಷ ಲೋಕಾರ್ಪಣೆಗೊಂಡಿದ್ದ ಅಯೋಧ್ಯೆ ರಾಮಮಂದಿರಕ್ಕೆ ನಿತ್ಯವೂ ಸಾಕಷ್ಟು ಭಾಗಗಳಿಂದ ಜನ ಭೇಟಿ ನೀಡುತ್ತಲೇ ಇರುತ್ತಾರೆ. ರಾಮಮಂದಿರ ಸದಾ ಜನರಿಂದ ತುಂಬಿ ತುಳುಕುತ್ತಲೇ ಇರುತ್ತದೆ. ಅದರಲ್ಲೂ  ಈ ತಿಂಗಳಂತೂ ಇನ್ನಷ್ಟು ರಶ್ ಕಂಡುಬಂದಿತ್ತು. ಇದಕ್ಕೆ ಕಾರಣ ಈ ತಿಂಗಳೇ ಕಳೆದ ವರ್ಷ ರಾಮಮಂದಿರ ಲೋಕಾರ್ಪಣೆಗೊಂಡಿತ್ತು.

ಇದಲ್ಲದೆ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಅಲ್ಲಿಗೆ ಬರುವ ಯಾತ್ರಾರ್ಥಿಗಳು ಅಯೋಧ್ಯೆ ರಾಮಮಂದಿರಕ್ಕೂ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಈಗ ರಾಮಂದಿರದಲ್ಲಿ ಭಕ್ತರ ದಟ್ಟಣೆ ವಿಪರೀತ ಎನ್ನುವಷ್ಟು ಹೆಚ್ಚಾಗಿದೆ.

ಈ ಕಾರಣಕ್ಕೆ ಸ್ಥಳೀಯ ಭಕ್ತರು ಮುಂದಿನ ಎರಡರಿಂದ ಮೂರು ವಾರಗಳ ಕಾಲ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡದೇ ಹೊರಗಿನಿಂದ ಯಾತ್ರೆ ಬರುವವರಿಗೆ ರಾಮಲಲ್ಲಾನ ದರ್ಶನ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಜನ್ಮಭೂಮಿ ಟ್ರಸ್ಟ್ ವಿನಂತಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments