Select Your Language

Notifications

webdunia
webdunia
webdunia
webdunia

ರಾಜೀವ್ಗಾಂಧಿ 77ನೇ ಜನ್ಮದಿನಾಚರಣೆ, ರಾಹುಲ್ ನಮನ

ರಾಜೀವ್ಗಾಂಧಿ 77ನೇ ಜನ್ಮದಿನಾಚರಣೆ, ರಾಹುಲ್ ನಮನ
ನವದೆಹಲಿ , ಶುಕ್ರವಾರ, 20 ಆಗಸ್ಟ್ 2021 (11:46 IST)
ನವದೆಹಲಿ,ಆ.20 : ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ 77 ನೆ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಅವರು ತಮ್ಮ ತಂದೆಗೆ ನಮನ ಸಲ್ಲಿಸಿದ್ದಾರೆ. ವೀರಭೂಮಿಯಲ್ಲಿರುವ ರಾಜೀವ್ಗಾಂಧಿ ಅವರ ಸ್ಮಾರಕಕ್ಕೆ ಆಗಮಿಸಿದ ರಾಹುಲ್ಗಾಂಧಿ ಅವರು ನಮನ ಸಲ್ಲಿಸಿ ಕೆಲ ಕಾಲ ಅಲ್ಲೇ ಕಾಲ ಕಳೆದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಪವನ್ಕುಮಾರ್ ಬನ್ಸಾಲ್, ಕೆ.ಸಿ.ವೇಣುಗೋಪಾಲ್, ಬಿ.ವಿ.ಶ್ರೀನಿವಾಸ್ ಮತ್ತಿತರ ಗಣ್ಯರು ರಾಹುಲ್ ಜತೆಗಿದ್ದರು. ಜಾತ್ಯಾತೀತ ಭಾರತವೊಂದೇ ಬದುಕುಳಿಯುವ ಭಾರತ ಎಂದು ನಂತರ ರಾಹುಲ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
ದೇಶದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ, ದೇಶಭಕ್ತ, 21 ನೇ ಶತಮಾನದ ವಿನ್ಯಾಸಗಾರ, ಭಾರತರತ್ನ ದಿ.ರಾಜೀವ್ಗಾಂಧಿ ಅವರಿಗೆ ಭಕ್ತಿಪೂರ್ವಕ ನಮನಗಳು ಎಂದು ಕಾಂಗ್ರೆಸ್ ಪಕ್ಷ ಟ್ವಿಟ್ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

'ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್', ಬದಲಾಗಲಿದೆ ವಿದ್ಯುತ್ ಬಿಲ್ ಪಾವತಿ ವಿಧಾನ