Select Your Language

Notifications

webdunia
webdunia
webdunia
webdunia

ಪತ್ನಿ ಸುನಂದಾ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್ ಮುಖಂಡ ಶಶಿ ತರೂರ್ ನಿರ್ದೋಷಿ

ಪತ್ನಿ ಸುನಂದಾ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್ ಮುಖಂಡ ಶಶಿ ತರೂರ್ ನಿರ್ದೋಷಿ
bengaluru , ಬುಧವಾರ, 18 ಆಗಸ್ಟ್ 2021 (14:09 IST)
ಪತ್ನಿ ಸುನಂದಾ ಪುಷ್ಕರ್ ಅನುಮಾನಸ್ಪದ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ
ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರಿಗೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ಮಹತ್ವದ ತೀರ್ಪು ನೀಡಿದೆ.
2014, ಜನವರಿ 17ರಂದು ದೆಹಲಿಯ ಐಷಾರಾಮಿ ಹೋಟೆಲ್ ನ ಕೊಠಡಿಯಲ್ಲಿ ಸುನಂದಾ ಪುಷ್ಕರ್ ಮೃತಪಟ್ಟಿದ್ದರು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಅನುಮಾನ ಉಂಟಾಗಿದ್ದು, ದೆಹಲಿ ಪೊಲೀಸರು ಶಶಿ ತರೂರ್ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಇದೀಗ ಶಶಿ ತರೂರ್ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದೆ.
ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಗೀತಾಂಗಲಿ ಘೋಯೆಲ್ ನೀಡಿದ ವರ್ಚುವಲ್ ತೀರ್ಪಿನಲ್ಲಿ ಶಶಿ ತರೂರ್ ಮೇಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿತ್ತು.
ನ್ಯಾಯಾಲಯದ ತೀರ್ಪಿಗೆ ಧನ್ಯವಾದ ಅರ್ಪಿಸಿದ ಶಶಿ ತರೂರ್, ಕಳೆದ ಏಳೂವರೆ ವರ್ಷಗಳಿಂದ ಪ್ರಕರಣದ ನೆಪದಲ್ಲಿ ನನಗೆ ತೀವ್ರ ಕಿರುಕುಳ ನೀಡಲಾಗಿತ್ತು. ಈಗ ಸಮಾಧಾನ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 35,178 ಕೊರೊನಾ ಪಾಸಿಟಿವ್ ಪತ್ತೆ