Select Your Language

Notifications

webdunia
webdunia
webdunia
webdunia

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ...?

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ...?
ಮುಂಬಯಿ , ಬುಧವಾರ, 18 ಆಗಸ್ಟ್ 2021 (13:29 IST)
ಮುಂಬಯಿ: 27 ಅಂತಸ್ತಿನ ಬಂಗಲೆ, ಅದರೊಳಗೆ ಸ್ವಿಮ್ಮಿಂಗ್ ಪೂಲ್, ಖಾಸಗಿ ವೈದ್ಯರ ಕ್ಲಿನಿಕ್, 168 ಕಾರುಗಳಿಗಾಗಿ ಗೆರಾಜ್, ಮಂದಿರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಏಷ್ಯಾದಲ್ಲೇ ಅತ್ಯಂತ ಆಕರ್ಷಣೀಯ ಮನೆ ಇರುವುದು ವಾಣಿಜ್ಯ ನಗರದಲ್ಲಿ. ಅದರ ಒಡೆಯ ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ. ಆದರೆ ಈ ಆಂಟಿಲಿಯಾ ಕಟ್ಟಿಸಿ, ವಾಸ ಮಾಡುವ ಮುನ್ನ ಅವರು ಎಲ್ಲಿದ್ದರು?

ತಮ್ಮ ಸೋದರನ ಕುಟುಂಬ ಹಾಗೂ ತಾಯಿಯೊಂದಿಗೆ ಬಹಳ ಸಾಧಾರಣವಾದ ಒಂದು ಬಂಗಲೆ 'ಸೀವಿಂಡ್'ನಲ್ಲಿ ಅವರು ವಾಸವಿದ್ದರು.
ಅಚ್ಚರಿಯಾದರೂ ಸತ್ಯ. 10 ವರ್ಷಗಳ ಮುನ್ನ, ಮುಕೇಶ್ ಅವರ ಕುಟುಂಬ 14 ಅಂತಸ್ತಿನ ಸೀವಿಂಡ್ನಲ್ಲಿ ವಾಸವಿತ್ತು. ಸದ್ಯ, ಆ ನಿವಾಸದಲ್ಲಿ ಮುಕೇಶ್ ಅವರ ತಾಯಿ ಕೊಕಿಲಾ ಬೆನ್ ಮಾತ್ರವೇ ವಾಸವಿದ್ದಾರಂತೆ. ವಾಸ್ತು ದೋಷದ ನೆಪ ಹೇಳಿ ಸೀವಿಂಡ್ನಿಂದ ಹೊರಗೆ ಬಂದ ಮುಕೇಶ್, ನೀತಾ ಮತ್ತು ಅವರ ಮೂವರು ಮಕ್ಕಳ ಐಷಾರಾಮಿ ಜೀವನಶೈಲಿಗೆ ಜಗತ್ತೇ ಮಾರು ಹೋಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗ ತಾರತಮ್ಯ ಎಂದು ಸುಪ್ರೀಂ ಕೋರ್ಟ್ ಛೀಮಾರಿ