Select Your Language

Notifications

webdunia
webdunia
webdunia
webdunia

ರಾಜಸ್ಥಾನ ಸ್ಥಳೀಯ ಚುನಾವಣೆ: 670 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ

ರಾಜಸ್ಥಾನ ಸ್ಥಳೀಯ ಚುನಾವಣೆ: 670 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ
ಜೈಪುರ , ಸೋಮವಾರ, 6 ಸೆಪ್ಟಂಬರ್ 2021 (07:32 IST)
ಜೈಪುರ (ಸೆ 06); ರಾಜಸ್ಥಾನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ರಾಜ್ಯದ ಆರು ಜಿಲ್ಲೆಗಳ 78 ಪಂಚಾಯತ್ ಸಮಿತಿಯ 1,564 ಸ್ಥಾನಗಳಿಗೆ ಮತ್ತು ಜಿಲ್ಲಾ ಪರಿಷತ್ನ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಿದೆ.

ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 1,564 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವು 670 ಪಂಚಾಯತಿ ಸ್ಥಾನಗಳನ್ನು ಮತ್ತು ಬಿಜೆಪಿ 551 ರಲ್ಲಿ ಸ್ಥಾನಗಳನ್ನು ಗೆದ್ದಿದೆ. ಇನ್ನು, ಆರ್ಎಲ್ಪಿ 40 ಮತ್ತು ಬಿಎಸ್ಪಿ 11 ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರ ಅಭ್ಯರ್ಥಿಗಳು 290 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಎರಡು ಸ್ಥಾನಗಳ ಫಲಿತಾಂಶ ಪ್ರಕಟವಾಗಿಲ್ಲ.
ಜಿಲ್ಲಾ ಪರಿಷತ್ನ ಒಟ್ಟು 200 ಸ್ಥಾನಗಳಲ್ಲಿ ಕಾಂಗ್ರೆಸ್ 99 ಸ್ಥಾನಗಳು, ಬಿಜೆಪಿ 90 ಸ್ಥಾನಗಳನ್ನು ಗೆದ್ದಿವೆ. ಉಳಿದಂತೆ ಇತರ ಪಕ್ಷಗಳು 11 ಸ್ಥಾನಗಳನ್ನು ಗೆದ್ದಿವೆ. ಕಳೆದ ಚುನಾವಣೆಯಲ್ಲಿ 1,328 ಪಂಚಾಯಿತಿ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 585 ಸ್ಥಾನ ಗೆದ್ದಿತ್ತು. ಆದರೆ, ಈ ಬಾರಿ ಒಟ್ಟು ಸ್ಥಾನಗಳ ಸಂಖ್ಯೆ 1,564ಕ್ಕೆ ಹೆಚ್ಚಿದ್ದರೂ, ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ 100 ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದಿದ್ದರೆ, 90 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು. ಆಗಸ್ಟ್ 26, 29 ಮತ್ತು ಸೆಪ್ಟೆಂಬರ್ 1 ರಂದು ಭರತಪುರ, ದೌಸಾ, ಜೈಪುರ, ಜೋಧಪುರ, ಸವಾಯಿ ಮಾಧೋಪುರ ಮತ್ತು ಸಿರೋಹಿ ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು ಆರು ಜಿಲ್ಲಾ ಪರಿಷತ್ನ 200 ಸದಸ್ಯರು ಮತ್ತು 78 ಪಂಚಾಯತ್ ಸಮಿತಿಯ 1,564 ಸದಸ್ಯರನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ 6 ರಿಂದ 8ನೇ ತರಗತಿ ವರೆಗೆ ಶಾಲಾರಂಭ