Select Your Language

Notifications

webdunia
webdunia
webdunia
webdunia

ಪ್ರತ್ಯೇಕ ಧರ್ಮದ ಹೋರಾಟ, ಕೂಗು ಇಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ

ಪ್ರತ್ಯೇಕ ಧರ್ಮದ ಹೋರಾಟ, ಕೂಗು ಇಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ
ಬೆಂಗಳೂರು , ಶುಕ್ರವಾರ, 3 ಸೆಪ್ಟಂಬರ್ 2021 (12:19 IST)
ಬೆಂಗಳೂರು : ಲಿಂಗಾಯಿತ, ವೀರಶೈವ ಯಾವುದೇ ಪ್ರತ್ಯೇಕ ಧರ್ಮದ ಬಗ್ಗೆ ನಾನು ಮಾತನಾಡಿಲ್ಲ, ಅಂತಹ ಯಾವುದೇ ಹೋರಾಟ, ಕೂಗು ಇಲ್ಲ. ನಾವು ಕೇಳಿರುವುದು ಧರ್ಮದ ಮಾನ್ಯತೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರವಾಗಿ ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇದೀಗ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ಲಿಂಗಾಯಿತ, ವೀರಶೈವ, ಪಂಚಮಸಾಲಿ ಹೀಗೆ ನಮ್ಮಲ್ಲಿಯೂ ಸಾಕಷ್ಟು ಉಪಪಂಗಡಗಳಿವೆ. 99 ಉಪಪಂಗಡಗಳು ಒಟ್ಟಾಗಿ ಸೇರುತ್ತೇವೆ. ಚುನಾವಣೆ ನಂತರ ನಾವೆಲ್ಲರೂ ಒಟ್ಟಾಗಿ ಸೇರಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಚರ್ಚಿಸುತ್ತೇವೆ ಎಂದರು.
ನಮ್ಮ ಸಮಾಜಕ್ಕೆ ಒಳ್ಳೆಯದಾಗಬೇಕು. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂಬ ಕಾರಣಕ್ಕೆ 2023ರ ಚುನಾವಣೆ ನಂತರ ಪಂಚಪೀಠದ ಗುರುಗಳು, ವಿರಕ್ತ ಸ್ವಾಮಿಜಿಗಳ ಜೊತೆ ಚರ್ಚಿಸಿ ಎಲ್ಲರೂ ಒಂದು ಗೂಡಿ ಧರ್ಮದ ಮಾನ್ಯತೆಗೆ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸೋಣ ಎಂದರು. ಅಲ್ಲದೇ ನಾನು ಪ್ರತ್ಯೇಕ ಧರ್ಮದ ವಿಚಾರ ಎಲ್ಲಿಯೂ ಎತ್ತಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಎಲ್ಲರೂ ಒಟ್ಟಿಗೆ ಮುನ್ನಡೆಯೋಣ ಎಂಬುದನ್ನು ತಿಳಿಸಿದ್ದೇನೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ತೈಲ ಬೆಲೆಯೇರಿಸಿ ಸಂಗ್ರಹಿಸಿದ 25 ಲಕ್ಷ ಕೋಟಿ ರೂ. ಎಲ್ಲಿ?: ಕೇಂದ್ರಕ್ಕೆ ರಾಹುಲ್ ಪ್ರಶ್ನೆ