Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದಲ್ಲಿ ಸೆ.೩೦ರಂದು ಉಪಚುನಾವಣೆ : ಮಮತಾ ಬ್ಯಾನರ್ಜಿ ನಿರಾಳ

ಪಶ್ಚಿಮ ಬಂಗಾಳದಲ್ಲಿ ಸೆ.೩೦ರಂದು ಉಪಚುನಾವಣೆ : ಮಮತಾ ಬ್ಯಾನರ್ಜಿ ನಿರಾಳ
ನವದೆಹಲಿ , ಶನಿವಾರ, 4 ಸೆಪ್ಟಂಬರ್ 2021 (15:08 IST)
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಸೆ.30 ರಂದು ಉಪಚುನಾವಣೆ ಘೋಷಿಸಿದೆ. ಬಂಗಾಳದ ಸಂಸರ್ ಗಂಜ್, ಜಂಗೀಪುರ, ಹಾಗೂ ಒಡಿಶಾದ ಪಿಪ್ಲಿಯ ಎರಡು ಸ್ಥಾನಗಳಿಗೆ ಉಪಚುನಾವಣೆ ಘೋಷಿಸಲಾಗಿದ್ದು, ಉಳಿದ ಕ್ಷೇತ್ರಗಳ ಉಪಚುನಾವಣೆಯಮ್ಮಿ ಮುಂದೂಡಲಾಗಿದೆ.

ಸೆ.30 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 3 ರಂದು ಮತಗಳನ್ನು ಎಣಿಕೆ ನಡೆಯಲಿದೆ. ಲಿ ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇತರ 31 ಕ್ಷೇತ್ರಗಳ ಉಪ ಚುನಾವಣೆಗಳನ್ನು ಮುಂದೂಡಲಾಗಿದೆ. ಪಶ್ಚಿಮ ಬಂಗಾಳ ರಾಜ್ಯದ ಸಾಂವಿಧಾನಿಕ ತುರ್ತುಸ್ಥಿತಿ ಮತ್ತು ವಿಶೇಷ ವಿನಂತಿಯನ್ನು ಪರಿಗಣಿಸಿ ಭಬನಿಪುರಕ್ಕೆ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತು, ಬಂಗಾಳ ವಿಧಾನಸಭೆಯಲ್ಲಿ ಒಟ್ಟು 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದಿತು. ಆದರೆ ಮಮತಾ ಬ್ಯಾನರ್ಜಿ ವೈಯಕ್ತಿಕ ಸ್ಪರ್ಧೆಯಲ್ಲಿ ಸೋಲುಂಡಿದ್ದರು. ಹೀಗಾಗಿ ಈ ಉಪಚುನಾವಣೆಯಲ್ಲಿ ಮಮತಾ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ…


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ನಿರ್ಧಾರ : ಮಾಧುಸ್ವಾಮಿ