Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ವರ್ಸಸ್ ಕೇಜ್ರಿವಾಲ್: ಮೊನ್ನೆ ಮೊನ್ನೆ ಫ್ರೆಂಡ್ಸ್, ಈಗ ಭಾರೀ ಎನಿಮೀಸ್

Rahul Gandhi-Kejriwal

Krishnaveni K

ನವದೆಹಲಿ , ಮಂಗಳವಾರ, 14 ಜನವರಿ 2025 (16:33 IST)
Photo Credit: X
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ವೇಳೆ ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಿರುಕುಬಿಟ್ಟಿದೆ. ಮೊನ್ನೆ ಮೊನ್ನೆ ಭಾರೀ ಸ್ನೇಹಿತರಂತಿದ್ದ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಈಗ ಶತ್ರುಗಳಂತೆ ಕಿತ್ತಾಡುತ್ತಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಜೊತೆ ಮೈತ್ರಿ ಮಾಡಲ್ಲ ಎಂದು ಕೇಜ್ರಿವಾಲ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಎರಡೂ ಪಕ್ಷಗಳ ನಡುವೆ ಮಾತ್ರವಲ್ಲ, ಇಂಡಿಯಾ ಮೈತ್ರಿಕೂಟದಲ್ಲೇ ಬಿರುಕು ಕಂಡುಬಂದಿತ್ತು.

ಇದೀಗ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಕೇಜ್ರಿವಾಲ್ ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾದಾಗ ಕೇಂದ್ರದ ವಿರುದ್ಧ ಇದೇ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಜ್ರಿವಾಲ್ ಪತ್ನಿ ಜೊತೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದರು.

ಆಗ ಕೇಜ್ರಿವಾಲ್ ಪತ್ನಿ ಸುನಿತಾರನ್ನು ಸೋನಿಯಾ ಸಂತೈಸಿದ್ದನ್ನು ಇಡೀ ದೇಶ ಕಂಡಿತ್ತು. ಆದರೆ ಈಗ ದೆಹಲಿ ಚುನಾವಣೆ ವೇಳೆ ಎರಡೂ ಪಕ್ಷಗಳ ನಾಯಕರು ದೂರವಾಗಿದ್ದಾರೆ. ದೆಹಲಿ ಚುನಾವಣೆ ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿ, ಕೇಜ್ರಿವಾಲ್ ನೇತೃತ್ವದ ಆಪ್ ಆಡಳಿತದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಆಪ್ ಸರ್ಕಾರ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ವಿಫಲವಾಗಿದೆ. ಆಪ್ ಮತ್ತು ಬಿಜೆಪಿಯ ನರೇಂದ್ರ ಮೋದಿ ಸುಳ್ಳು ಭರವಸೆಗಳನ್ನು ನೀಡಿ ಜನರ ಹಾದಿ ತಪ್ಪಿಸುವುದೇ ಕೆಲಸ ಎಂದೆಲ್ಲಾ ವಾಚಮಗೋಚರವಾಗಿ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ‘ದೆಹಲಿಗೆ ಬಂದು ರಾಹುಲ್ ಗಾಂಧಿ ನನ್ನ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದಾರೆ. ಆದರೆ ಅದಕ್ಕೆಲ್ಲಾ ನಾನು ಕಾಮೆಂಟ್ ಮಾಡಲ್ಲ. ಅವರ ಹೋರಾಟವೇನಿದ್ದರೂ ಕಾಂಗ್ರೆಸ್ ಉಳಿಸಲು. ಆದರೆ ನನ್ನ ಹೋರಾಟ ದೇಶ ಉಳಿಸಲು’ ಎಂದಿದ್ದಾರೆ. ಒಂದು ಕಾಲದಲ್ಲಿ ಆಪ್ತಮಿತ್ರರಂತಿದ್ದವರು ಈಗ ಚುನಾವಣೆ ಸಮಯದಲ್ಲಿ ಶತ್ರುಗಳಂತೆ ವಾಕ್ಪ್ರಹಾರ ನಡೆಸುವುದನ್ನು ಜನ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಗ್‌ನಲ್ಲಿ ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ಒಂದು ಕೋಟಿ ಭಕ್ತರಿಂದ ಅಮೃತ ಸ್ನಾನ