Select Your Language

Notifications

webdunia
webdunia
webdunia
webdunia

ದೆಹಲಿ ಚುನಾವಣೆಗೆ ಆಮ್‌ ಆದ್ಮಿಗೆ ಸಿಕ್ತು ಆನೆಬಲ: ಕುರುಕ್ಷೇತ್ರದಲ್ಲಿ ಏಕಾಂಗಿಯಾದ ಕಾಂಗ್ರೆಸ್‌

Delhi Assembly Elections

Sampriya

ನವದೆಹಲಿ , ಭಾನುವಾರ, 12 ಜನವರಿ 2025 (11:27 IST)
Photo Courtesy X
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವನ್ನು (ಎಎಪಿ) ಬೆಂಬಲಿಸುವುದಾಗಿ ರಾಜಸ್ಥಾನ ಸಂಸದ ಹುನಮಾನ್‌ ಬೆನಿವಾಲ್‌ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) ಘೋಷಿಸಿದೆ. ಇದರಿಂದ ಎಎಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ.

ರಾಜ್ಯಸಭೆಯಲ್ಲಿ ಎಎಪಿ ನಾಯಕರಾಗಿರುವ ಸಂಜಯ್‌ ಸಿಂಗ್‌ ಅವರನ್ನು ನಗರದಲ್ಲಿ ಭೇಟಿಯಾದ ಬಳಿಕ ಬೆನಿವಾಲ್‌ ಅವರು ತಮ್ಮ ಪಕ್ಷದ ನಿಲುವು ಪ್ರಕಟಿಸಿದ್ದಾರೆ. ಅದರೊಂದಿಗೆ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಸಮಾಜವಾದಿ ಪಕ್ಷಗಳ (ಎಸ್‌ಪಿ) ಹಾದಿಯಲ್ಲಿ ಎಎಪಿ ಸಾಗಿದೆ.

ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು, ದೇಶದಾದ್ಯಂತ ಮೀಸಲಾತಿ ಪಟ್ಟಿಯಲ್ಲಿ ಜಾಟ್‌ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ, ಬೆನಿವಾಲ್ ಬೆಂಬಲ ಸೂಚಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು, ಹಲವು ವರ್ಷಗಳಿಂದ ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದೆ. ಹೀಗಾಗಿ, ದೆಹಲಿ ಚುನಾವಣೆಯಲ್ಲಿ ಎಎಪಿ ವಿರುದ್ಧ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕಿತ್ತು ಎಂದು ಬೆನಿವಾಲ್‌ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಸಹ ಈಗಾಗಲೇ ಎಎಪಿಗೆ ಬೆಂಬಲ ಸೂಚಿಸಿದೆ. ಟಿಎಂಸಿ ಮತ್ತು ಎಸ್‌ಪಿಯೂ ಈಗಾಗಲೇ ಈ ತೀರ್ಮಾನ ಮಾಡಿವೆ. ಇದರೊಂದಿಗೆ, ಇಂಡಿಯಾ ಮೈತ್ರಿಕೂಟದಲ್ಲಿರುವ ಪ್ರಮುಖ ಪಕ್ಷ ಕಾಂಗ್ರೆಸ್‌ ಭಾರಿ ಹಿನ್ನಡೆ ಎದುರಾದಂತಾಗಿದೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ಬಳಿಕ (ಜ.8ರಂದು) ಫಲಿತಾಂಶ ಪ್ರಕಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯರ ಶರ್ಟ್‌ ಬಿಚ್ಚಿಸಿ ಬ್ಲೇಸರ್‌ನಲ್ಲೇ ಮನೆಗೆ ಕಳುಹಿಸಿದ ಪ್ರಾಂಶುಪಾಲ: ಮುಂದೇನಾಯಿತು ಗೊತ್ತಾ