Select Your Language

Notifications

webdunia
webdunia
webdunia
webdunia

ಎಎಪಿ ಮೇಲೆ ಅಸಮಾಧಾನ ಹೊರಹಾಕಿ ಬಿಜೆಪಿ ಸೇರಿದ ಕೈಲಾಶ್ ಗೆಹ್ಲೋಟ್‌

Delhi's former Transport Minister Kailash Gahlot,  Bharatiya Janata Party,  Aam Aadmi Party's senior-most leader Kailash Gahlot

Sampriya

ನವದೆಹಲಿ , ಸೋಮವಾರ, 18 ನವೆಂಬರ್ 2024 (15:59 IST)
Photo Courtesy X
ನವದೆಹಲಿ:  ದೆಹಲಿಯ ಮಾಜಿ ಸಾರಿಗೆ ಸಚಿವ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಕೈಲಾಶ್ ಗೆಹ್ಲೋಟ್ ಅವರು ಇಂದು ಬೆಳಗ್ಗೆ ಕೇಂದ್ರ ಸಚಿವರಾದ ಎಂಎಲ್ ಖಟ್ಟರ್ ಮತ್ತು ಹರ್ಷ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

ನಂತರ ಮಾತನಾಡಿದ ಅವರು "ಇದು ರಾತ್ರೋರಾತ್ರಿ ನಿರ್ಧಾರ ಎಂದು ಕೆಲವರು ಭಾವಿಸಬಹುದು. ಅಥವಾ ಒತ್ತಡದಿಂದಾಗಿ. ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ  ಒತ್ತಡದಿಂದಾಗಿ ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರೀಯ ತನಿಖಾ ದಳ ಅಥವಾ ಜಾರಿ ನಿರ್ದೇಶನಾಲಯದ ಒತ್ತಡದಿಂದಾಗಿ ನಾನು ಇದನ್ನು ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಅಂತವರಿಗೆ ನಾನು ಹೇಳುವುದೇನೆಂದರೆ  2015 ರಿಂದ, ಎಎಪಿ ಸದಸ್ಯನಾಗಿ, ಶಾಸಕನಾಗಿ ಮತ್ತು ಸಚಿವನಾಗಿ ಯಾವುದನ್ನು ಒತ್ತಡದಿಂದ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಾಸ್ತವವೆಂದರೆ, ಎಎಪಿ ತನ್ನ ಮೌಲ್ಯಗಳನ್ನು ರಾಜಿ ಮಾಡಿಕೊಂಡಿದೆ," ಎಂದು ಅವರು ಘೋಷಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಂಬ್ಯುಲೆನ್ಸ್ ಗೆ ದಾರಿ ಮಾಡಿ ಕೊಡದ ತಪ್ಪಿಗೆ ಕಾರು ಮಾಲಿಕನಿಗೆ ಬಿತ್ತು 2.5 ಲಕ್ಷ ದಂಡ: ವಿಡಿಯೋ