Select Your Language

Notifications

webdunia
webdunia
webdunia
Saturday, 5 April 2025
webdunia

ರಾಜ್ಯಸಭಾ ಸದಸ್ಯರಾಗಿ ಜೆಪಿ ನಡ್ಡಾ ಪ್ರಮಾಣ ವಚನ ಸ್ವೀಕಾರ

Bharatiya Janata Party (BJP) President JP Nadda

Sampriya

ನವದೆಹಲಿ , ಶನಿವಾರ, 6 ಏಪ್ರಿಲ್ 2024 (18:40 IST)
Photo Courtesy X
ನವದೆಹಲಿ: ಭಾರತೀಯ ಜನತಾ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು  ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಸಂಸತ್ ಭವನದಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತ ಸದಸ್ಯರಾಗಿರುವ ನಡ್ಡಾ ಅವರಿಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಪ್ರಮಾಣ ವಚನ ಬೋಧಿಸಿದರು.

ಈ ಬಗ್ಗೆ ರಾಷ್ಟ್ರಪತಿ ಎಕ್ಸ್‌ ಖಾತೆಯಲ್ಲಿ ಬರೆದು ಪೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ.   "ಉಪರಾಷ್ಟ್ರಪತಿ  ಜಗದೀಪ್ ಧಂಖರ್ ಅವರು ಇಂದು ಸಂಸತ್ ಭವನದಲ್ಲಿ ಚುನಾಯಿತ ರಾಜ್ಯಸಭಾ ಸದಸ್ಯರಾಗಿ ಜಗತ್ ಪ್ರಕಾಶ್ ನಾರಾಯಣ ಲಾಲ್ ನಡ್ಡಾ ಅವರಿಗೆ ಪ್ರಮಾಣ ವಚನ ಬೋಧಿಸಿದರು" ಎಂದು ಬರೆಯಲಾಗಿದೆ.

ನಡ್ಡಾ ಅವರನ್ನು ಹೊರತುಪಡಿಸಿ, ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಇತರ ಐವರು ಸದಸ್ಯರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಪ್ರಮಾಣವಚನ ಸ್ವೀಕರಿಸಿದ ಚುನಾಯಿತ ಸದಸ್ಯರಲ್ಲಿ ಮಹಾರಾಷ್ಟ್ರದಿಂದ ಅಶೋಕರಾವ್ ಶಂಕರರಾವ್ ಚವಾಣ್, ರಾಜಸ್ಥಾನದಿಂದ ಚುನ್ನಿಲಾಲ್ ಗರಾಸಿಯಾ, ತೆಲಂಗಾಣದಿಂದ ಅನಿಲ್ ಕುಮಾರ್ ಯಾದವ್ ಮಂದಾಡಿ ಮತ್ತು ಪಶ್ಚಿಮ ಬಂಗಾಳದಿಂದ ಸುಶ್ಮಿತಾ ದೇವ್ ಮತ್ತು ಮೊಹಮ್ಮದ್ ನಡಿಮುಲ್ ಹಕ್ ಸೇರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಕೈಬೆರಳು ಕತ್ತರಿಸಿ ಕಾಳಿಗೆ ರಕ್ತ ಸಮರ್ಪಿಸಿದ ಕಾರವಾರದ ವ್ಯಕ್ತಿ